ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯ ಘಟನೆಗೆ ಕ್ಷಣಗಳಿಗೆ ಆರಂಭವಾಗಿದ್ದು, ಇಂದು ಸಂಜೆ ಫ್ರಾನ್ಸ್’ನಿಂದ ಐದು ರಫೇಲ್ ಯುದ್ಧ ವಿಮಾನಗಳು ದೇಶಕ್ಕೆ ಬಂದಿಳಿಯಲಿವೆ.

ಹರಿಯಾಣಾದ ಅಂಬಾಲಾದಲ್ಲಿರುವ ವಾಯುನೆಲೆಗೆ ವಿಮಾನಗಳು ಇಂದು ಸಂಜೆ 7 ರಿಂದ 7.30ರ ಅವಧಿಯಲ್ಲಿ ಬಂದಿಳಿಯಲಿದ್ದು, ವಾಯುನೆಲೆಯ ಸುತ್ತಮುತ್ತ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ, ಈ ಪ್ರದೇಶದಲ್ಲಿ ಫೋಟೋ ಹಾಗೂ ವೀಡಿಯೋ ತೆಗೆಯುವುದನ್ನೂ ಸಹ ನಿಷೇಧಿಸಲಾಗಿದ್ದು, ಖಾಸಗಿ ಡ್ರೋಣ್ ಹಾರಾಟಕ್ಕೂ ಸಹ ನಿರ್ಬಂಧ ಹೇರಲಾಗಿದೆ.

ಇನ್ನು, ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಲು ಅಂಬಾಲಾದ ಜನ ಉತ್ಸುಕರಾಗಿದ್ದು, ಮೊಂಬತ್ತಿ ಹಚ್ಚಿ ಸ್ವಾಗತ ಕೋರಲು ಸಿದ್ದತೆ ನಡೆಸಿದ್ದಾರೆ. ನಿನ್ನೆ ಫ್ರಾನ್ಸ್’ನಿಂದ ಹೊರಟಿರುವ ರಫೇಲ್ ಯುದ್ಧ ವಿಮಾನ 7 ಸಾವಿರ ಕಿಲೋ ಮೀಟರ್ ಹಾರಾಟ ಮಾಡಿ ಆಕಾಶದಲ್ಲಿಯೇ ಇಂಧನವನ್ನು ತುಂಬಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ತಂಗಿ ಇಂದು ಭಾರತದ ಹರಿಯಾಣದಲ್ಲಿರುವ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿದೆ.
Get In Touch With Us info@kalpa.news Whatsapp: 9481252093
















