ನವದೆಹಲಿ: ಹಗಲಿರುಳೆನ್ನದೆ, ಬಿಸಿಲು-ಮಳೆ-ಗಾಳಿ ಎನ್ನದೇ ನಿರಂತರವಾಗಿ ದೇಶದ ರಕ್ಷಣೆಗೆ ತಮ್ಮನ್ನೇ ಅರ್ಪಿಸಿಕೊಂಡಿರುವ ಭಾರತೀಯ ಸೇನಾ ಯೋಧರ ಹಿತಕಾಯುವ ಭಾಗವಾಗಿ ಹವಾಮಾನಕ್ಕೆ ತಕ್ಕಂತೆ ಸಮವಸ್ತ್ರ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಕುರಿತಂತೆ ರಕ್ಷಣಾ ಸಚಿವಾಲಯ ಹವಾಮಾನಕ್ಕೆ ತಕ್ಕಂತೆ ಯೋಧರ ಆರೋಗ್ಯಕ್ಕೆ ಪೂರಕವಾಗಿರುವಂತೆ ಅತ್ಯುತ್ತಮ ಗುಣಮಟ್ಟದ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಶೀಘ್ರದಲ್ಲೇ ಇದು ಯೋಧರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವಿಶೇಷ ವರದಿ ಪ್ರಕಟಿಸಿದೆ.
ಪ್ರತಿಕೂಲ ಹವಾಮಾನದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸಹಕಾರಿಯಾಗುವಂತೆ ಸಮವಸ್ತ್ರವನ್ನು ರೂಪಿಸಲಾಗುತ್ತಿದೆ.
ಪ್ರಸ್ತುತ ಸಮವಸ್ತ್ರವು ಟೆರ್ರಿಕಾಟ್ ಫೈಬರ್ ಅನ್ನು ಅದರ ಮುಖ್ಯ ಮೂಲವಸ್ತುವಾಗಿ ಹೊಂದಿದ್ದು, ಇದು ಬಿಸಿ ಮತ್ತು ಆರ್ದ್ರತೆಯ ಸ್ಥಿತಿಗಳಿಗೆ ಸೂಕ್ತವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹತ್ತಿಯಿಂದ ಸಿದ್ದಪಡಿಸಿರುವ ಸಮವಸ್ತ್ರಗಳನ್ನು ಸಿದ್ದಪಡಿಸಲಾಗುತ್ತಿದ್ದು, ಎಲ್ಲ ಹವಾಮಾನಗಳಿಗೆ ಹೊಂದಿಕೊಳ್ಳುವಂತೆ ಹಾಗೂ ನಿರ್ವಹಣೆಗೂ ಸಹಕಾರಿಯಾಗಿದೆ ಎನ್ನಲಾಗಿದೆ.
Discussion about this post