Wednesday, November 12, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನವರಾತ್ರಿಗೂ ಪ್ರಕೃತಿಗೂ, ವೈಜ್ಞಾನಿಕತೆಗೂ ಇದೆ ಸಂಬಂಧ | ಇದರ ಮಹತ್ವವೇನು?

September 30, 2025
in Special Articles
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ನವರಾತ್ರಿಯು ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡುವ ನಮಗೆ ಆಂತರಿಕ ಶಕ್ತಿಯನ್ನು ನೀಡುವ ಶಕ್ತಿ ದೇವತೆಯ ಉಪಾಸನಾ ಕಾಲ ಎಂಬುದು ಜನಜನಿತವಾಗಿದೆ. ನಮ್ಮಲ್ಲಿಯ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಸಕಾತಾತ್ಮಕ ಶಕ್ತಿಯನ್ನು ಆತ್ಮಸ್ಥೈರ್ಯವನ್ನು ತುಂಬುವ ಪರ್ವವಾಗಿದೆ.

ನವರಾತ್ರಿ ಕೇವಲ ಧಾರ್ಮಿಕ ಹಬ್ಬವಾಗಿರದೇ ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದಿರುವ ಹಬ್ಬವಾಗಿದೆ. ನವರಾತ್ರಿಯಲ್ಲಿ ಒಂಬತ್ತು ಚಕ್ರಗಳನ್ನು ಜಾಗೃತಗೊಳಿಸುವುದು, ಪೂಜೆ ಆರಾಧನೆ, ಸಂಪ್ರದಾಯ, ಉಪವಾಸ ಮೊದಲಾದವುಗಳ ಮೂಲಕ ಹಬ್ಬವನ್ನು ಆಚರಿಸುತ್ತೇವೆ. ಪ್ರಕೃತಿ ಪೂಜೆಯು, ಸಾಧನೆಯನ್ನು ಕೂಡ ಮಾಡುತ್ತಾರೆ.

ವೈಜ್ಞಾನಿಕವಾಗಿ ಹಬ್ಬದ ಮಹತ್ವವನ್ನು ಚರ್ಚಿಸುವುದಾದರೆ ಈ ಕಾಲದಲ್ಲಿ ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುವ ಸಮಯವಾಗಿದೆ. ಇಂತಹ ಬದಲಾವಣೆಯ ಸಮಯದಲ್ಲಿ ಹೆಚ್ಚಾಗಿ ರೋಗ ರುಜಿನಗಳು ಆರೋಗ್ಯ ಸಮಸ್ಯೆಗಳು ಬರುತ್ತವೆ. ಮಳೆಗಾಲದಲ್ಲಿ ಇರುವ ವಾತಾವರಣ ಮತ್ತು ಆಹಾರ ಪದ್ಧತಿಯ ಬದಲಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬೇರೆ ರೀತಿ ಊಟೋಪಚಾರ ಆಹಾರ ವಿಹಾರಗಳನ್ನು ಅಭ್ಯಾಸ ಮಾಡಿಕೊಳ್ಳಲು ಆಶ್ವಯುಜ ಮಾಸ ಮೊದಲಾಗುತ್ತದೆ. ಈ ಮಳೆಗಾಲದ ಆರಂಭದಲ್ಲಿ ಕಫ ಉತ್ಪನ್ನ ಮಾಡುವ ಮೊಸರನ್ನು ಬಳಸುತ್ತಿರುವುದಿಲ್ಲ. ಈ ಬದಲಾವಣೆಯ ಸಮಯದಲ್ಲಿ ದವಸ ಧಾನ್ಯಗಳಲ್ಲಿ ಹುಳಗಳಾಗುವ ಸಂಭವ ಹೆಚ್ಚಾಗುವುದರಿಂದ ಬೇಳೆಕಾಳುಗಳನ್ನು ಮತ್ತು ತರಕಾರಿಗಳನ್ನು ಬಳಸುವುದಿಲ್ಲ, ಈ ಸಮಯದಲ್ಲಿ ಆರೋಗ್ಯಕ್ಕೆ ಯಾವುದು ಹಿತವೋ ಆಯುರ್ವೇದದಲ್ಲಿ ಈ ಕಾಲಕ್ಕೆ ಸೂಕ್ತ ಆಹಾರ ಸೂಚಿಸಿದೆಯೋ ಅಂತಹ ಆಹಾರ ಸೇವನೆ ಮಾಡಲಾಗುತ್ತದೆ.
ಉಪವಾಸದಲ್ಲಿ ಸಾತ್ವಿಕ ಆಹಾರವನ್ನು ಸೇವನೆ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಮಸಾಲೆ ಜೀರ್ಣಕ್ರಿಯೆಗೆ ಬಾಧಕವಾದ ಅಂಶಗಳು ನಮ್ಮ ದೇಹದಲ್ಲಿ ಹೆಚ್ಚು ಪ್ರಮಾಣದ ಹಾನಿಕಾರಕ ಟಾಕ್ಸಿನ್‌ಗಳು ಶೇಖರವಾಗುವುದನ್ನು ಕಡಿಮೆ ಮಾಡಿ ಆರೋಗ್ಯ ಕಾಪ್ಡಿಕೊಳ್ಳಲು ಸಹಾಯಕವಾಗಿರುತ್ತದೆ. ಮನುಷ್ಯನ ಆರೋಗ್ಯ ಅವನ ಮನಸ್ಥಿತಿಗೆ ಕಾರಣವಾಗುವುದರಿಂದ ಈ ಸಮಯದ ಆಹಾರ ವಿಹಾರದ ಪದ್ಧತಿಯಿಂದ ಮನುಷ್ಯನ ಚಿಂತೆಗಳು ಪರಿಹಾರವಾಗಿ ಆನಂದದಿಂದ ಇರುತ್ತಾನೆ. ಏಕಾದಶಿ ದಿನದಂದು ಮಾತ್ರ ಸಂಪೂರ್ಣ ನಿರಾಹಾರ ಮಾಡುತ್ತಾರೆ. ಹಬ್ಬ ಹರಿದಿನ ವ್ರತ ನೇಮಾದಿಗಳನ್ನ ಮಾಡುವಾಗ ದೇಹದಲ್ಲಿ ಚೈತನ್ಯ ಕಾಪಾಡಿಕೊಂಡು ಶಕ್ತಿ ಪ್ರದಾಯಕ ಹಾಗೂ ಆರೋಗ್ಯಕರ ಫಲಾಹಾರ ಉಪಾಹಾರಗಳನ್ನ ಸೇವಿಸಲಾಗುತ್ತದೆ.

ಈ ಸಮಯದಲ್ಲಿ ಹಗಲು  12 ತಾಸು ರಾತ್ರಿಯೂ 12 ತಾಸುಗಳು ಇರುತ್ತವೆ ಇದನ್ನು ಇಕ್ಷಿನಾಕ್ಸ್‌ ಎಂದು ಕರೆಯಲಾಗುತ್ತದೆ ಇಂತಹ ಸಮಯದಲ್ಲಿ  ಕತ್ತಲು ಬೆಳಕು ಸಮ ಪ್ರಮಾಣದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಹಗಲು ಹೆಚ್ಚು ರಾತ್ರಿ ಕಡಿಮೆ, ಚಳಿಗಾಲದಲ್ಲಿ ರಾತ್ರಿ ಹೆಚ್ಚು ಹಗಲು ಕಡಿಮೆ ಇರುತ್ತದೆ. ಈ ಕಾಲದಲ್ಲಿ ಅರ್ಧ ರಾತ್ರಿ ಅರ್ಧ ಹಗಲು ಇರುವುದರಿಂದ ಈ ಕಾಲದ ವಾತಾವರಣದಲ್ಲಿ ಉಪವಾಸ ಧ್ಯಾನ ಮೊದಲಾದ ಸಾಧನೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸರಿಯಾಗಿ ಗಮನ ಹರಿಸಬೇಕಾದ ಸಮಯವೇ ಆಗಿರುತ್ತದೆ.

ನವರಾತ್ರಿಯಲ್ಲಿ ಪರಿಸರ ಮತ್ತು ವಾತಾವರಣ ಬಣ್ಣಗಳಿಂದ ಶೃಂಗಾರಗೊಂಡು ಆನಂದಮಯವಾಗಿರುತ್ತದೆ ಹೂವುಗಳು ಚೆನ್ನಾಗಿ ಅರಳಿನಿಂತಿರುತ್ತವೆ ಅವುಗಳಿಂದ ದೇವಿಯ ಆರಾಧನೆಯನ್ನು ಒಂದೊಂದು ಬಣ್ಣಗಳ ಪ್ರತೀಕಗಳನ್ನು ಅರಿತು ನವದೇವಿಯರ ಪೂಜೆಯನ್ನು ಮಾಡಲಾಗುತ್ತದೆ.
ನವರಾತ್ರಿಯ ಸಮಯದ ಉಪವಾಸದಲ್ಲಿ ವಿವಿಧ ರೀತಿಯಲ್ಲಿ ಉಪವಾಸವನ್ನು ಮಾಡುತ್ತಾರೆ. ಕೇವಲ ನೀರನ್ನು ಸೇವಿಸಿ ಉಪವಾಸ ಕೇವಲ ಫಲಾಹಾರದ ಉಪವಾಸ, ಬೇಯಿಸದೇ ಮಾಡಿದ ಪದಾರ್ಥಗಳನ್ನು ತಿಂದು ಉಪವಾಸ, ನಿಷಿದ್ಧ ಅಂದರೆ ತಾಮಸಿ ಪದಾರ್ಥಗಳನ್ನು ಸೇವಿಸದೇ ಉಪವಾಸಗಳನ್ನು ಮಾಡುತ್ತಾರೆ. ಈ ಬಗೆಯಲ್ಲಿ ಉಪವಾಸಗಳನ್ನು ಅವರ ದೈಹಿಕ ಮತ್ತು ಆತ್ಮ ಶಕ್ತಿಯ ಅನುಸಾರ ಮಾಡುತ್ತಾರೆ. ಅತೀ ಸಾತ್ವಿಕ ಆಹಾರವನ್ನು ಸೇವಿಸುವವರು ದೇಹದಲ್ಲಿ ಊತ್ತಮ ಶಕ್ತಿಯನ್ನು ಉಳ್ಳವರು ಕೇವಲ ನೀರಿನ ಸೇವನೆಯಿಂದ ಉಪವಾಸ ಮಾಡುತ್ತಾರೆ. ಹೀಗೆ ನಮ್ಮ ಆಹಾರ ಮತ್ತು ಉಪವಾಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ನಮ್ಮಲ್ಲಿ ಸಾತ್ವಿಕತೆ ಮತ್ತು ಶಕ್ತಿ ಪ್ರದಾಯಕ ಆಹಾರ ಸೇವಿಸಿ ಭಕ್ತಿಯ ಜೊತೆಗೆ ಉತ್ತಮ ಆರೋಗ್ಯ ಪಡೆಯುವ ಕಾಲ ನವರಾತ್ರಿ.

ನವರಾತ್ರಿಯ ಸಮಯದಲ್ಲಿ ಪೂಜೆ ಮತ್ತು ಮಂತ್ರ ಜಪ ಅನುಷ್ಠಾನಗಳನ್ನು ಮಾಡುತ್ತಾರೆ. ಇದರಿಂದ ನಮ್ಮ ದೇಹದ ಚಕ್ರಗಳು ಜಾಗೃತಗೊಳ್ಳುತ್ತವೆ.  ನಮ್ಮಲ್ಲಿ ಎಲ್ಲ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಜಾಗೃತಗೊಳಿಸಿ ದುಷ್ಟ ಶಕ್ತಿಗಳ ಜೊತೆಗೆ ಹೋರಾಡಲು ಪ್ರೇರಣೆಯನ್ನು ನೀಡಿ ನಮ್ಮನ್ನು ಜೀವನದಲ್ಲಿ ಜಯಶಾಲಿಗಳನ್ನಾಗಿ ಮಾಡುವ ಶಕ್ತಿಯನ್ನು ನಮ್ಮಲ್ಲಿ ನಾವು ಈ ಸಮಯದಲ್ಲಿ ಜಾಗೃತಗೊಳಿಸಬಹುದಾಗಿದೆ. ಇಲ್ಲಿ ನವ ಎಂದರೆ ಕೇವಲ ಒಂಭತ್ತು ಅಲ್ಲದೇ ನವ ಎಂದರೆ ಹೊಸದಾದ ಎಂದೂ ಕೂಡ ಅರ್ಥ ಮಾಡಿಕೊಳ್ಳಬಹದು. ನಮ್ಮ ಜೀವನದಲ್ಲಿ ನವಚೈತನ್ಯವನ್ನು ಹೊಸ ಶಕ್ತಿಯನ್ನು ಪಡೆದುಕೊಳ್ಳುವ ಕಾಲ ನವರಾತ್ರಿ.

ನವರಾತ್ರಿಯಲ್ಲಿ ದೇವಿಯ ಪ್ರಸನ್ನತೆಯ ಸಲುವಾಗಿ ಅನೇಕ ಹೋಮ ಹವನಾದಿಗಳನ್ನು ಮಾಡುತ್ತಾರೆ. ಇದರಿಂದ ವಾತಾವರಣದಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳು, ಹಾನಿಕಾರಕ ವಸ್ತುಗಳು ನಾಶವಾಗಿ ವಾತಾವರಣವು ಪರಿಶುದ್ಧವಾಗಿ ಆರೋಗ್ಯಯುತ ವಾತಾವರಣವನ್ನು ಸೃಷ್ಟಿಸುತ್ತದೆ.  ಹೀಗೆ ಅನೇಕ ರೀತಿಯಲ್ಲಿ ವೈಜ್ಞಾನಿಕ ಕಾರಣಗಳನ್ನು ಇಟ್ಟುಕೊಂಡೇ ನಮ್ಮ ಪೂರ್ವಜರು ಹಬ್ಬಗಳನ್ನು ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದ್ದಾರೆ, ಶಿಸ್ತುಬದ್ಧ ಜೀವನ ಮತ್ತು ಸರಿಯಾದ ಅಭ್ಯಾಸಗಳನ್ನು ಮಾಡಿಸುವ ಕಾರಣ ದೇವರು ಪೂಜೆ ಸಂಪ್ರದಾಯಗಳ ಮೂಲಕ ಉತ್ತಮ ಜೀವನದ ಮಾರ್ಗವನ್ನು ತೋರಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: #NavaratriDasara 2025Kannada News WebsiteLatest News KannadaNavratri Scientific Reasonಆಯುರ್ವೇದಒಂಬತ್ತು ಚಕ್ರತರಕಾರಿದುಷ್ಟಶಕ್ತಿಧಾರ್ಮಿಕ ಹಬ್ಬನವರಾತ್ರಿವೈಜ್ಞಾನಿಕಶಕ್ತಿ ದೇವತೆಸಂಪ್ರದಾಯ
Previous Post

ಸೊರಬ | ನವರಾತ್ರಿ ಸಂಭ್ರಮದಲ್ಲಿ ಗಮನಸೆಳೆದ ದಾಂಡಿಯಾ ರಾಸ್

Next Post

30ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್ | ಕರ್ನಾಟಕದ ಪ್ರಜ್ವಲ್’ಗೆ ಜಯ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

30ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್ | ಕರ್ನಾಟಕದ ಪ್ರಜ್ವಲ್'ಗೆ ಜಯ!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಗಮನಿಸಿ | ಈ 7 ದಿನಗಳು ಬೆಂಗಳೂರು-ಅಶೋಕಪುರಂ ಮೆಮು ರೈಲಿನ ಮಹತ್ವದ ಮಾಹಿತಿ

November 12, 2025

ನ.13ರ ನಾಳೆ ಹುಬ್ಬಳ್ಳಿಯಿಂದ ಯಲಹಂಕಕ್ಕೆ ಒಂದು ವಿಶೇಷ ರೈಲು | ಹೀಗಿದೆ ಸಮಯ

November 12, 2025

ಋತುಚಕ್ರ ರಜೆ | ಸರ್ಕಾರದ ಅಧಿಕೃತ ಆದೇಶ | ಷರತ್ತುಗಳೇನು? ಯಾವೆಲ್ಲಾ ಮಹಿಳಾ ನೌಕರರಿಗೆ ಅನ್ವಯ?

November 12, 2025

ಕೈದಿಗಳಿಗೆ ರಾಜಾತಿಥ್ಯ | ಮುಖ್ಯಮಂತ್ರಿ – ಗೃಹಸಚಿವರ ರಾಜೀನಾಮೆಗೆ ಆಗ್ರಹ

November 12, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಮನಿಸಿ | ಈ 7 ದಿನಗಳು ಬೆಂಗಳೂರು-ಅಶೋಕಪುರಂ ಮೆಮು ರೈಲಿನ ಮಹತ್ವದ ಮಾಹಿತಿ

November 12, 2025

ನ.13ರ ನಾಳೆ ಹುಬ್ಬಳ್ಳಿಯಿಂದ ಯಲಹಂಕಕ್ಕೆ ಒಂದು ವಿಶೇಷ ರೈಲು | ಹೀಗಿದೆ ಸಮಯ

November 12, 2025

ಋತುಚಕ್ರ ರಜೆ | ಸರ್ಕಾರದ ಅಧಿಕೃತ ಆದೇಶ | ಷರತ್ತುಗಳೇನು? ಯಾವೆಲ್ಲಾ ಮಹಿಳಾ ನೌಕರರಿಗೆ ಅನ್ವಯ?

November 12, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!