ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ಪಿಂಡಜಪ್ರವರಾರೂಢ ಚಂಡಕೋಪಾಸ್ತ್ರ ಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರು ತಾ||
ನವರಾತ್ರಿಯಲ್ಲಿ ಮೂರನೆಯ ದಿನ ಪೂಜೆಗೊಳ್ಳುವ ದೇವಿಯನ್ನು ಚಂದ್ರಘಂಟಾ ದೇವಿಯನ್ನಲಾಗುತ್ತದೆ.
ಶಿವಪುರಾಣದ ಪ್ರಕಾರ ರುದ್ರನು ಚಂದ್ರಶೇಖರ, ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರಘಂಟಾ ದೇವಿ. ಮೂರನೇ ದಿನ ತದಿಗೆಯಂದು ಚಂದ್ರಘಂಟಾದೇವಿಯನ್ನು ಪೂಜಿಸುತ್ತೇವೆ. ಶಾಂತಿದಾಯಕ ಸ್ವರೂಪದ ದೇವಿ ನಮಗೆ ಶ್ರೇಯಸ್ಸನ್ನು ಕೊಡುವವಳಾಗಿದ್ದಾಳೆ. ನಕಾರಾತ್ಮಕ ದುಷ್ಟ ಶಕ್ತಿಗಳನ್ನು ಹೊಡೆದೊಡಿಸುವ ಚಂದ್ರಘಂಟಾ ದೇವಿಯು ಭಕ್ತರಿಗೆ ಆರೋಗ್ಯ, ಸಮೃದ್ಧಿ ಮತ್ತು ಸಂತಸಗಳನ್ನು ಹಂಚುತ್ತಾಳೆ.
ಅವಳ ಮಸ್ತಕದಲ್ಲಿ ಗಂಟೆ ಆಕಾರ ಚಂದ್ರನಿರುವ ಕಾರಣ ಅವಳಿಗೆ ಚಂದ್ರ ಘಂಟಾದೇವಿ ಎನ್ನಲಾಗುತ್ತದೆ. ಹೊಂಬಣ್ಣದೇಹ ದೇಹವನ್ನು ಹೊಂದಿರುವ ದೇವಿಗೆ 10ಕೈ ಗಳಿದ್ದು ದುಷ್ಟ ಸಂಹಾರಿಣಿ ಎಂದೇ ಪ್ರಸಿದ್ಧಳು. ಅವಳು ಒಂದು ಕೈಲಿ ತ್ರಿಶೂಲ, ಗದೆ, ಬಾಣ, ಧನಸ್ಸು, ಖಡ್ಗ, ಕಮಲ, ಗಂಟೆ ಮತ್ತು ಒಂದರಲ್ಲಿ ಕಮಂಡಲು ಮತ್ತೊಂದರಲ್ಲಿ ಭಕ್ತರಿಗೆ ಅಭಯ ಹಸ್ತವನ್ನು ನೀಡಿದ್ದಾಳೆ. ಅವಳ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ. ಅವಳ ಮುದ್ರೆ ಯುದ್ಧಾಸನ್ನಳಾದಂತೆ ಇರುತತದೆ ವ್ಯಾಘ್ರವು ಅವಳ ವಾಹನವಾಗಿದ್ದು ಕಡು ನೀಲಿ ಬಣ್ಣ ಅವಳ ಪ್ರಿಯ ಬಣ್ಣವಾಗಿದೆ. ಅವಳು ಕೆಂಪು ವಸ್ತ್ರ ಧರಿಸಿರುತ್ತಾಳೆ. ದೇವಿಗೆ ಖೀರನ್ನು ನಿವೇದಿಸಿದರೆ ಅಥವಾ ಹಾಲಿನ ಯಾವುದೇ ಸಿಹಿಯನ್ನು ನಿವೇದಿಸಿದರೆ ಅವಳಿಗೆ ಬಹಳ ಪ್ರೀತಿ, ಅವಳು ಭಕ್ತರ ನೋವನ್ನು ಹರಣ ಮಾಡುತ್ತಾಳೆ. ದೇವಿಗೆ ಮಲ್ಲಿಗೆಯ ಹೂವು ಇಷ್ಟವಾದ ಪುಷ್ಪವಾಗಿದೆ.
ಮೂರನೆಯ ದಿನದ ಆರಾಧನೆಯಿಂದ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶ ಪಡೆಯುತ್ತದೆ. ದೇವಿಯ ಆರಅಧನೆಯಿಂದ ವಿಶೇಷ ವಸ್ತುಗಳ ಅನುಭವ ಹಾಗೂ ದರ್ಶನವಾಗುತ್ತದೆ. ಈ ಅಲೌಕಿಕ ಅನುಭವ ಪಡೆಯಲು ಸಾಧಕನು ಅತೀ ಜಾಗರೂಕನಾಗಿರಬೇಕಾಗುತ್ತದೆ. ಚಂದ್ರಘಂಟಾ ದೇವಿಯ ಆರಾಧನೆಯಿಂದ ಎಲ್ಲ ರೀತಿಯ ಪಾಪಗಳು ಹಾಗೂ ಬಂಧಕಗಳ ನಾಶವಾಗಿಭಕ್ತರ ಕಷ್ಟಗಳು ನಿವಾರಣೆಯಾಗಿ ಸುಖವನ್ನು ಹೊಂದುತ್ತಾರೆ. ಅವಳ ಘಂಟಾನಾದದಿಂದ ಶತ್ರುಗಳು, ಭೂತಪ್ರೇತ ಪಿಶಾಚಗಳ ನಾಶವಾಗಿ ಹೋಗುತ್ತವೆ
ಚಂದ್ರಘಂಟಾ ದೇವಿಯ ಉಪಾಸನೆಯಿಂದ ನಿಷ್ಠೆಯಿಂದ ಭಕ್ತಿ ಪೂರ್ವಕ ಮಾಡಿದರೆ ನಮ್ಮ ಕಾಯಾ, ವಾಚಾ, ಮನಸ್ಸಿನಿಂದ ಮಾಡಿದ ಪಾಪಗಳು ನಾಶವಾಗಿ ಮನುಷ್ಯನು ಪರಿಶುದ್ಧನಾಗುತ್ತಾನೆ, ಇದರಿಂದ ಸಕಲ ಸಾಂಸಾರಿಕ ಪಾಪ ರಾಶಿಗಳ ನಾಶದಿಂದ ಪರಮಪದ ಪಡೆಯುವ ಪಯಣದಲ್ಲಿ ಸಫಲರಾಗುತತಾರೆ ಇದರಿಂದ ಇಹಲೋಕದ ತಾಪಗಳನ್ನು ಪರಿಹರಿಸಿಕೊಂಡು ಪರಲೋಕಕ್ಕೆ ಪಯಣಿಸಿ ಮುಕ್ತಿಯನ್ನು ಪಡೆಯುವ ಮಾರ್ಗ ದೊರೆಯುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post