ನವದೆಹಲಿ: ಸಂಸತ್‌ನ ಮೇಲ್ಮನೆ ರಾಜ್ಯಸಭೆಯ ಡಡೆಪ್ಯೂಟಿ ಛೇರ‌್ಮನ್ ಹುದ್ದೆಗೆ ಇಂದು ನಡೆದ ಚುಣಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರು ವಿಜಯಲಕ್ಷ್ಮೀ ವಲಿದಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಈ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಹರಿವಂಶ್ 125 ಮತಗಳನ್ನು ಪಡೆದು ವಿಜಯಮಾಲೆ ಧರಿಸಿದ್ದರೆ, ಕಾಂಗ್ರೆಸ್/ಯುಪಿಎ ಬೆಂಬಲಿತ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ 105 ಮತಗಳನ್ನು ಪಡೆಯುವ ಮೂಲಕ ಸೋಲನ್ನಪ್ಪಿದ್ದಾರೆ.
ಇನ್ನು, ಜಯಗಳಿಸಿದ ಹರಿವಂಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸದನದಲ್ಲೇ ಆತ್ಮೀಯವಾಗಿ ಅಭಿನಂದಿಸಿದ್ದು, ಪ್ರತಿಪಕ್ಷದ ಗುಲಾಂ ನಬಿ ಆಜಾದ್ ಸಹ ಅಭಿನಂದಿಸಿದ್ದಾರೆ.
PM Narendra Modi congratulates NDA Candidate Harivansh Narayan Singh who was elected as Rajya Sabha Deputy Chairman pic.twitter.com/lTy2yRpxik
— ANI (@ANI) August 9, 2018
Discussion about this post