ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಗೌರಿ-ಗಣೇಶ ಹಬ್ಬ #Gowri-Ganesha festival ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿರುವ ವಾಹನ ತಯಾರಿಕಾ ಕಂಪೆನಿಗಳು ಭರ್ಜರಿ ಆಫರ್ #Car exchange ನೀಡಿವೆ.
ಹೌದು… ಹಳೇ ವಾಹನಗಳನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯ್ತಿ ನೀಡುವುದಾಗಿ ವಾಹನ ತಯಾರಿಕಾ ಕಂಪೆನಿಗಳು ಘೋಷಣೆ ಮಾಡಿವೆ. ಈ ರಿಯಾಯ್ತಿ ಕಂಪನಿಗಳು ಈಗಾಗಲೇ ನೀಡುತ್ತಿರುವ ಇತರೆ ವಿವಿಧ ರಿಯಾಯ್ತಿಗೆ ಹೊರತಾಗಿರಲಿದೆ ಎಂದು ವರದಿಯಾಗಿದೆ.
Also read: ಜೈಲಿನಲ್ಲಿ ಸಿಗರೇಟ್ ನೀಡಿದ್ದು ಇವರೇ, ದರ್ಶನ್ ಹೇಳಿಕೆಯಲ್ಲಿ ಮಾಹಿತಿ ಬಹಿರಂಗ
ಯಾಕೆ ಈ ನಿರ್ಧಾರ?
ವಾಹನ ತಯಾರಿಕಾ ಕಂಪೆನಿಗಳ ಜೊತೆ ಸಭೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ #Nitin Gadkari ಅವರು ಈ ನಿರ್ಧಾರ ಪ್ರಕಟಿಸಿದ್ದು, ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ರಸ್ತೆಯಿಂದ ಹೊರಗಿಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಹೀಗೆ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ ಯಾವುದೇ ವ್ಯಕ್ತಿಗಳು ಈ ಹೊಸ ರಿಯಾಯ್ತಿ ಆಫರ್ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ, ಟೊಯೋಟಾ, ಹೊಂಡಾ, ಎಂಜಿ ಹೆಕ್ಟರ್, ರೆನಾಲ್ಟ್, ನಿಸ್ಸಾನ್, ಸ್ಕೋಡಾ ಕಂಪನಿಗಳು ಶೇ.15ರಷ್ಟು ಅಥವಾ 20000 ರು. ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುವುದಾಗಿ ಪ್ರಕಟಿಸಿವೆ. ಇನ್ನು ಮರ್ಸಿಡಿಸಿ ಬೆಂಜ್ 25000 ರೂ. ಡಿಸ್ಕೌಂಟ್ ಆಫರ್ ಮುಂದಿಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post