ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರೈಲಿನಲ್ಲಿ ಬೇಬಿ ಬರ್ತ್ Baby birth ಪರಿಚಯಿಸುವುದರ ಮೂಲಕ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಭಾರತೀಯ ರೈಲ್ವೆ ತಾಯಂದಿರ ದಿನದ ಉಡುಗೊರೆ ನೀಡಲು ಮುಂದಾಗಿದೆ.
ಹೌದು…. ಪುಟ್ಟ ಮಕ್ಕಳೊಂದಿಗೆ ರೈಲು ಪ್ರಯಾಣ ಮಾಡುವ ತಾಯಂದಿರ ಅನುಕೂಲಕ್ಕಾಗಿ ವಿಭಿನ್ನ ಹಾಗೂ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪುಟ್ಟ ಮಕ್ಕಳನ್ನು ಹೊಂದಿರುವವರಿಗಾಗಿಯೇ ಈ ವಿಶೇಷ ಸೀಟ್ ಅನ್ನು ನಿಗದಿ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ Indian Railway ಹೇಳಿದೆ.
ಲಕ್ನೋ ಮತ್ತು ದೆಹಲಿ ವಿಭಾಗಗಳು ಜಂಟಿಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದು, 12 ಮತ್ತು 60ನೇ ಬರ್ತ್‌ಗಳಲ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಲಕ್ನೋ ಮೇಲ್ 12230ರ AC ಮೂರು-ಶ್ರೇಣಿಯ (194129/C) B4 ಕೋಚ್‌ನಲ್ಲಿ ಈ ವೈಶಿಷ್ಟ್ಯಮಯ ಆಗಿರುವ ಬೇಬಿ ಬರ್ತ್ ಪ್ರಾಯೋಗಿಕ ಯೋಜನೆಯಯನ್ನು ಪರಿಚಯಿಸಲಾಗಿದೆ.
Also read: ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ಘೋಷಣೆ
ಬೇಬಿ ಸೀಟ್ ಬಗ್ಗೆ ಮಾಹಿತಿ ನೀಡಿರುವ ಲಕ್ನೋ ವಿಭಾಗದ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಅತುಲ್ ಸಿಂಗ್ , ತಾಯಿ ಜೊತೆಗೆ ಮಗುವಿನ ಸುರಕ್ಷತೆಗೂ ಭಾರತೀಯ ರೈಲ್ವೆಯಲ್ಲಿ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸೀಟ್ ಜೊತೆಗೆ ಮಗುವಿಗಾಗಿ ಈ “ಬೇಬಿ ಸೀಟ್ ಅನ್ನು ಜೋಡಿಸಲಾಗಿದೆ. ಬೇಬಿ ಸೀಟಿನ ಆಯಾಮಗಳು 770 ಎಂಎಂ ಉದ್ದ, 255 ಎಂಎಂ ಅಗಲ ಮತ್ತು 76.2 ಎಂಎಂ ಎತ್ತರವಾಗಿರುತ್ತದೆ. ಮಗುವನ್ನು ಸುರಕ್ಷಿತವಾಗಿರಿಸಲು ಇದು ಪಟ್ಟಿಗಳನ್ನು ಹೊಂದಿದೆ. ಹಾಗೂ ಹಿಂಜ್‌ಗಳನ್ನು ಹೊಂದಿರುವುದರಿಂದ ಅದನ್ನು ಮಡಚಬಹುದಾಗಿದೆ. ಅದರ ಬಳಕೆ ಇಲ್ಲದಿದ್ದಾಗ, ಅದನ್ನು ಸ್ಟಾಪ್‌ನೊಂದಿಗೆ ಸುರಕ್ಷಿತಗೊಳಿಸಬಹುದು. ಇದರಿಂದ ಮಗುವಿಗೆ ಸೀಟನ್ನು ಹೊಂದಿಸುವುದು ತುಂಬಾ ಸುಲಭವಾಗುತ್ತದೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಈ ಬೇಬಿ ಸೀಟ್ ಅನ್ನು ಕಾಯ್ದಿರಿಸಲು ಯಾವುದೇ ಕಾರ್ಯವಿಧಾನವಿಲ್ಲ. ಆದರೆ ಅವರು ಕೆಳಗಿನ ಸೀಟನ್ ಅನ್ನು ತಮ್ಮ ಸಹ ಪ್ರಯಾಣಿಕರೊಂದಿಗೆ ಸೀಟನ್ನು ಬದಲಾಯಿಸಲು ಆನ್-ಬೋರ್ಡ್ ರೈಲು ಟಿಕೆಟ್ ಪರೀಕ್ಷಕರನ್ನು ಸಂಪರ್ಕಿಸಬಹುದು. ಮಗುವಿನ ಸೀಟ್ ಅನ್ನು ಅದರೊಂದಿಗೆ ಲಗತ್ತಿಸಲಾಗುತ್ತದೆ. ವಿಶೇಷ ಸೀಟ್‌ಗಾಗಿ ಪುಟ್ಟ ಮಕ್ಕಳನ್ನು ಹೊಂದಿರುವ ತಾಯಂದಿರಿಗಾಗಿ ಪ್ರತ್ಯೇಕ ವಿಭಾಗವನ್ನು ರಚಿಸಲು ಶೀಘ್ರದಲ್ಲೇ CRIS ಅನ್ನು ತಂಡ ಸಂಪರ್ಕಿಸುತ್ತದೆ ಎಂದು ಲಕ್ನೋ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಸುರೇಶ್ ಕುಮಾರ್ ಸಪ್ರಾ ಹೇಳಿದ್ದಾರೆ.
ಮಹಾರಾಷ್ಟ್ರ ಮೂಲದ ಎಂಜಿನಿಯರ್ ನಿತಿನ್ ಡಿಯೋರ್ ತಮ್ಮ ಪುಟ್ಟ ಮಗುವಿನೊಂದಿಗೆ ಪ್ರಯಾಣಿಸುವಾಗ ತಾಯಂದಿರನ್ನು ಬೆಂಬಲಿಸುವ ವೈಶಿಷ್ಟ್ಯವನ್ನು ರಚಿಸುವ ಕಲ್ಪನೆಯನ್ನು ರೈಲ್ವೆ ಮಂಡಳಿಯ ಇತ್ತೀಚಿನ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕಲ್ಪನೆಗೆ ಬೇಬಿ ಸೀಟ್ ರೂಪದಲ್ಲಿ ಆಕಾರವನ್ನು ನೀಡಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ತಾಯಂದಿರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಅದು ಯಶಸ್ವಿಯಾದರೆ ರೈಲ್ವೆಯ ಎಲ್ಲಾ ರೈಲುಗಳಲ್ಲಿ ಬೇಬಿ ಸೀಟ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post