ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಭದ್ರಾವತಿ |
ವಿಐಎಸ್’ಎಲ್ ಕಾರ್ಖಾನೆ #VISL Factory ಮುಚ್ಚುವ ಆದೇಶ ಹಾಗೂ ಖಾಸಗೀಕರಣ ಅನುಮೋದನೆಯನ್ನು ಹಿಂಪಡೆಯಲು ಉಕ್ಕು ಸಚಿವರು ಕ್ಯಾಬಿನೆಟ್ ಸಮಿತಿಯ ಸಚಿವರಿಗೆ ಮನವರಿಕೆ ಮಾಡಿಕೊಡಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ #H D Kumaraswamy ಹೇಳಿದ್ದಾರೆ.
ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ನೇತೃತ್ವದಲ್ಲಿ ವಿಐಎಸ್’ಎಲ್ ಕಾರ್ಮಿಕರ ಸಂಘದ ನಿಯೋಗ ತಮ್ಮನ್ನು ಭೇಟಿಯಾದ ವೇಳೆ ಅವರು ಮಾತನಾಡಿದ್ದಾರೆ.
ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ಹೂಡಿಕೆಗೆ ಸಂಬAಧಿಸಿದAತೆ ಮಾತ್ರವಲ್ಲ ವಿಐಎಸ್’ಎಲ್ ಮುಚ್ಚುವ, ಖಾಸಗೀಕರಣ ಅನುಮೋದನೆ ಹಿಂಪಡೆಯುವ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಸಮಯಬೇಕು. ಆದರೆ, ಕಾರ್ಮಿಕರು ಆತಂಕಕ್ಕೆ ಒಳಗಾಗುವುದು ಬೇಡ. ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ವಿಐಎಸ್’ಎಲ್ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವುದರಿಂದ ಕೇವಲ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಯಾಗಲಿದೆ. ಮಾತ್ರವಲ್ಲ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವುದರೊಂದಿಗೆ ಭದ್ರಾವತಿ ತಾಲೂಕಿನ ಸಹಸ್ರಾರು ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ ಎಂಬ ಅಂಶವನ್ನು ನಿಯೋಗ ಮನವರಿಕೆ ಮಾಡಿ ಕೊಟ್ಟಿತು.
ಪುನಶ್ಚೇತನಕ್ಕೆ 15,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಮತ್ತು ಡಿಸ್’ಇನ್ವೆಸ್ಟೆö್ಮಂಟ್ ಅನುಮೋದನೆಯನ್ನು ತಕ್ಷಣವೇ ಹಿಂಪಡೆಯಲು ಮುಂಬರುವ ಕ್ಯಾಬಿನೆಟ್ ಕಮಿಟಿ ಮೀಟಿಂಗ್’ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕಾರ್ಮಿಕರ ಸಂಘದ ವತಿಯಿಂದ ಮನವಿ ಮಾಡಲಾಯಿತು.
Also read: ಸಂಸ್ಕೃತಿಯ ಜೊತೆಜೊತೆಗೆ ಉದ್ಯಮದಲ್ಲೂ ಯಶಸ್ಸು ಗಳಿಸಬೇಕು | ಸಂಸದ ತೇಜಸ್ವಿ ಸೂರ್ಯ ಸಲಹೆ
ರಾಮನದುರ್ಗದಲ್ಲಿ ವಿಐಎಸ್’ಎಲ್ ಕಬ್ಬಿಣದ ಅದಿರು ಗಣಿಗಾರಿಕೆಯ ಅಭಿವೃದ್ಧಿ ಮತ್ತು ಎನ್’ಇಬಿ ಕಬ್ಬಿಣದ ಅದಿರು ಗಣಿ ಬಗ್ಗೆ ನಡೆಯುತ್ತಿರುವ ನ್ಯಾಯಾಲಯದ ಪ್ರಕರಣಕ್ಕೆ ಸಚಿವರ ಗಮನ ಸೆಳೆಯಲಾಯಿತು.
ಗುತ್ತಿಗೆದಾರರ ಕಾರ್ಮಿಕರಿಗೆ ಹೆಚ್ಚು ಕೆಲಸದ ದಿನಗಳನ್ನು ಒದಗಿಸುವ ಸಲುವಾಗಿ ಕಾರ್ಖಾನೆಯ ಉತ್ಪಾದನೆ ಹೆಚ್ಚಿಸಲು ಬಿಲಾಯಿ ಸ್ಟೀಲ್ ಪ್ಲಾಂಟ್ ನಿಂದ ತಿಂಗಳಿಗೆ 5,000 ಟನ್ ಬ್ಲೂಮ್ಸ್ ಮತ್ತು ಎಎಸ್’ಪಿನಿಂದ ವಿಐಎಸ್’ಎಲ್’ಗೆ 2,000 ಟನ್ ಇಂಗಾಟ್ ಮೆಟೀರಿಯಲ್ ಅನ್ನು ಎಸ್’ಎಐಎಲ್ ಮ್ಯಾನೇಜ್ಮೆಂಟ್ ಪೂರೈಸುವಂತೆ ನಿರ್ದೇಶನ ನೀಡುವಂತೆ ಕೋರಿದರು. ಇದರಿಂದ ಗುತ್ತಿಗೆದಾರರ ಕಾರ್ಮಿಕರ ಕೆಲಸದ ದಿನಗಳನ್ನು ಹೆಚ್ಚಿಸಬಹುದು ಎಂದು ತಿಳಿಸಲಾಯಿತು. ಕಾರ್ಖಾನೆಗೆ ಅಗತ್ಯವಿರುವ ಮೆಟೀರಿಯಲ್ ಅನ್ನು ಪೂರೈಸಲು ತಕ್ಷಣವೇ ಎಸ್’ಎಐಎಲ್ ಅಧ್ಯP್ಷÀರೊಂದಿಗೆ ಮಾತುಕತೆ ನಡೆಸಲು ಸಚಿವರು ತಮ್ಮ ಪಿಎಸ್ ಅವರಿಗೆ ಸಚಿವರು ಸೂಚನೆ ನೀಡಿದರು.
ಇದೇ ವೇಳೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನೂ ಸಹ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು.
ವಿಐಎಸ್’ಎಲ್ ನೌಕರರ ಸಂಘದ ಪದಾಧಿಕಾರಿಗಳಾದ ಜೆ. ಜಗದೀಶ್, ಕೆ.ಬಿ. ಮಲ್ಲಿಕಾರ್ಜುನ, ಅಮೃತ್ ಕುಮಾರ್, ಕೆ.ಆರ್. ಮನು, ಎಸ್. ಮೋಹನ್, ಗುತ್ತಿಗೆ ಕಾರ್ಮಿಕ ನೌಕರರ ಪರವಾಗಿ ಎಸ್. ವಿನೋದ್ ಕುಮಾರ್, ಜೆ. ಕಿರಣ್ ಮತ್ತು ಆನಂದ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post