ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಉತ್ತಮ ಪ್ರದರ್ಶನ ನೀಡಿದ ನಂತರ ಚಂದ್ರಬಾಬು ನಾಯ್ಡು #Chandra Babu Naidu ಅವರು ಸ್ಥಾಪಿಸಿದ ಕಂಪನಿಯು ಗಮನಾರ್ಹ ಲಾಭ ಗಳಿಸುವ ಮೂಲಕ ಕೇವಲ 5 ದಿನದಲ್ಲಿ ಚಂದ್ರಬಾಬು ನಾಯ್ಡು ಆಸ್ತಿ 870 ಕೋಟಿ ರೂ.ಗೆ ಹೆಚ್ಚಳಗೊಂಡಿದೆ.
ಹೌದು ಹೆರಿಟೇಜ್ ಫುಡ್ಸ್‌ನ #Heritage Foods ಷೇರುಗಳು ಕಳೆದ ಐದು ದಿನಗಳಲ್ಲಿ ಶೇಕಡಾ 55ರಷ್ಟು ಏರಿಕೆಯಾಗಿದ್ದು, ಕಂಪನಿಯ ಒಡೆತನ ಹೊಂದಿರುವ ಅವರ ಪತ್ನಿ ನಾರಾ ಭುವನೇಶ್ವರಿ ಅವರ ಆಸ್ತಿ ಮೌಲ್ಯ 535 ಕೋಟಿ ರೂ. ಹಾಗೂ ಪುತ್ರ ಲೋಕೇಶ್ 237 ಕೋಟಿ ರೂ. ಗಳಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಿದ ಕಾರಣ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್ ಕಂಪನಿಯ ಷೇರುಗಳ ಮೌಲ್ಯವು ಚುನಾವಣೆ ಫಲಿತಾಂಶದ ಬಳಿಕ ಗಣನೀಯವಾಗಿ ಏರಿಕೆಯಾಗಿದೆ.
Also read: ಪರಿಷತ್ ಚುನಾವಣೆ | ನಿರೀಕ್ಷೆಗೂ ಮೀರಿ ಬೆಂಬಲ ಸಂತಸ ತಂದಿದೆ: ಪ್ರಕಾಶ್ ತಲಕಾಲಕೊಪ್ಪ
ಚುನಾವಣಾ ಫಲಿತಾಂಶ ಪ್ರಕಟವಾಗುವ ಕೆಲವು ಗಂಟೆಗಳ ಮೊದಲು ಅಂದರೆ ಜೂನ್ 3 ರಂದು 424 ರೂ ಇದ್ದ ಹೆರಿಟೇಜ್ ಫುಡ್ಸ್ ಷೇರು ಬೆಲೆ ಇಂದು 6661.25 ರೂ. ಗೆ ಏರಿಕೆಯಾಗಿದೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ.
ಹೆರಿಟೇಜ್ ಫುಡ್ಸ್ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಷೇರುಗಳ ಪ್ರಮಾಣವು ಶೇ.35.7ರಷ್ಟಿದೆ. ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಶೇ.24.37, ಪುತ್ರ ಲೋಕೇಶ್ ಶೇ.10.82ರಷ್ಟು ಹಾಗೂ ಸೊಸೆ ಬ್ರಹ್ಮಿಣಿ ೦.೪೬ರಷ್ಟು ಷೇರುಗಳನ್ನು ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮೊಮ್ಮಗ ದೇವಾಂಶ್ ಕೂಡ ಡೇರಿ ಕಂಪನಿಯಲ್ಲಿ 0.06ರಷ್ಟು ಷೇರು ಹೊಂದಿದ್ದಾನೆ.
1992ರಲ್ಲಿ ಹೆರಿಟೇಜ್ ಫುಡ್ಸ್ ಕಂಪನಿಯನ್ನು ಸ್ಥಾಪನೆ ಮಾಡಲಾಗಿದ್ದು, ಡೇರಿ ಉತ್ಪನ್ನಗಳ ಪೂರೈಕೆಗೆ ಹೆಸರುವಾಸಿಯಾಗಿದೆ. ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್, ಇಮ್ಯುನಿಟಿ ಮಿಲ್ಕ್ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post