ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳವಣಿಗೆಯೊಂದರಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್’ಪಿಜಿ ಸಿಲಿಂಡರ್’ಗಳ #Commercial use LPG cylinder ಬೆಲೆಯನ್ನು 49 ರೂಪಾಯಿ ಇಳಿಸಲಾಗಿದೆ.
ಈ ಕುರಿತಂತೆ ತೈಲ ಮಾರುಕಟ್ಟೆ ಕಂಪೆನಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ 49 ರೂಪಾಯಿ ಇಳಿಕೆ ಮಾಡಲಾಗಿದೆ.
ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್’ಪಿಜಿ ಸಿಲಿಂಡರ್ ಚಿಲ್ಲರೆ ಬೆಲೆಯನ್ನು 1,740.50 ರೂ.ಗೆ ಪರಿಷ್ಕರಿಸಲಾಗಿದೆ.
ಜನವರಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್’ಗಳ ಬೆಲೆ ಏರಿಕೆಯಾದ ನಂತರ ಇದು ಸಂಭವಿಸಿದೆ. ಇದು ಹೋಟೆಲ್’ಗಳು, ರೆಸ್ಟೋರೆಂಟ್’ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ವೆಚ್ಚದ ಹೊರೆಯನ್ನು ಹೆಚ್ಚಿಸಿದೆ.
ಕಳೆದ ತಿಂಗಳು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 111 ರೂ. ಹೆಚ್ಚಿಸಿತ್ತು. ದೆಹಲಿಯಲ್ಲಿ ಅದರ ಚಿಲ್ಲರೆ ಬೆಲೆ 1,691.50 ರೂ.ಗೆ ತಲುಪಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















