ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದಬಾಂಗ್ ದೆಹಲಿ ಕೆಸಿ #Dabang Delhi KC ತಂಡವು ಪ್ರೊ ಕಬಡ್ಡಿ ಲೀಗ್ ಸೀಸನ್ 12 ರ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಬಲ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ರಾಜಧಾನಿ ಆಧಾರಿತ ಈ ಫ್ರಾಂಚೈಸಿ ಸೀಸನ್ 12 ಅನ್ನು ಸ್ಫೋಟಕ ರೀತಿಯಲ್ಲಿ ಆರಂಭಿಸಿ ಮೊದಲ ಆರು ಪಂದ್ಯಗಳನ್ನು ಗೆದ್ದು ನೇರವಾಗಿ ಕಿರೀಟ ಪೈಪೋಟಿದಾರರಾಗಿ ಹೊರಹೊಮ್ಮಿತು. ಪಟ್ನಾ ಪೈರೇಟ್ಸ್ ವಿರುದ್ಧ (33-30) ಸಣ್ಣ ಅಂತರದ ಸೋಲು ಕಂಡರೂ, ಅದು ತಂಡದ ಹೋರಾಟದ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು. ತಕ್ಷಣವೇ ಐದು ಸತತ ಜಯಗಳನ್ನು ದಾಖಲಿಸಿ, ಪಿಕೆಎಲ್ ಸೀಸನ್ 12 ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.

ಗೆಲುವಿನ ಬಳಿಕ ಮಾತನಾಡಿದ ದಬಾಂಗ್ ದೆಹಲಿ ಕೆ.ಸಿಯ ಮುಖ್ಯ ಕೋಚ್ ಜೋಗಿಂದರ್ ನರವಾಲ್ ಈ ಸೀಸನ್‌ನಲ್ಲಿ ನಮ್ಮ ತಂಡ ನಿರಂತರ ಹೋರಾಟ ನಡೆಸಿದ್ದು, ಪ್ರತಿಯೊಬ್ಬ ಆಟಗಾರ ಅಗತ್ಯ ಸಮಯದಲ್ಲಿ ಹೊಣೆ ಹೊತ್ತಿದ್ದಾರೆ. ಪುಣೆರಿ ಪಲ್ಟಾನ್ ನಮ್ಮ ಪೈಪೋಟಿದಾರರಾಗಿದ್ದು, ಫೈನಲ್‌ನಲ್ಲಿ ನಾವು ಶೇಕಡಾ 100 ಪ್ರಯತ್ನ ನೀಡುತ್ತೇವೆ.

ದಬಾಂಗ್ ದೆಹಲಿ ಕೆ.ಸಿ ತಮ್ಮ ಅನುಭವ, ಆತ್ಮವಿಶ್ವಾಸ ಮತ್ತು ಬಲಿಷ್ಠ ತಂಡದ ಸಹಾಯದಿಂದ ಪಿಕೆಎಲ್ ಕಿರೀಟವನ್ನು ಮರುಸ್ವೀಕರಿಸಲು ಸಜ್ಜಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post