ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹಿರಿಯ ನಟ ಮಿಥುನ್ ಚಕ್ರವರ್ತಿ #Mithun Chakraborty ಅವರು ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ #Dadasaheb Phalke ಭಾಜನರಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಅವರ ಪ್ರಯಾಣ ಹಾಗೂ ಸಿನಿ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ #Ashwin Vaishnav ಅವರು ತಿಳಿಸಿದ್ದಾರೆ.

1950ಲ್ಲಿ ಜನಿಸಿದ ಮಿಥುನ್ ಚಕ್ರವರ್ತಿ ಅವರು 1976ರಲ್ಲಿ. ಚಿತ್ರರಂಗ ಪ್ರವೇಶಿಸಿದರು. ಮೃಗಯಾ ಅವರ ನಟನೆಯ ಮೊದಲ ಸಿನಿಮಾವಾಗಿದ್ದು, ಮಿಥುನ್ ಚಕ್ರವರ್ತಿ ಅವರು ಕೇವಲ ನಟರಷ್ಟೇ ಅಲ್ಲ, ಟಿವಿ ನಿರೂಪಕ, ನಿರ್ಮಾಪಕ, ರಾಜಕಾರಣಿ ಆಗಿದ್ದಾರೆ. ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಹೆಸರು ಪಡೆದಿದ್ದಾರೆ. ಮೊದಲ ಸಿನಿಮಾದ ನಟನೆಗೆ ಮಿಥುನ್ ಚಕ್ರವರ್ತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post