ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿಮಗೆ ಚಹಾ #Tea ಕುಡಿಯುತ್ತಾ ಸಿಗರೇಟ್ ಸೇದುವ ಅಭ್ಯಾಸ ಇದೆಯಾ? ಹಾಗಾದರೆ, ಇಂದೇ ಬಿಟ್ಟು ಬಿಡಿ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟಕ್ಕೂ ಏನಿದು ಆತಂಕಕಾರಿ ಸುದ್ದಿ? ಮುಂದೆ ಓದಿ…
ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ಚಹಾ ಸೇವನೆ ಮಾಡುತ್ತಾ ಸಿಗರೇಟ್ ಸೇದುವ ಹವ್ಯಾಸ ರೂಢಿಯಾಗಿರುತ್ತದೆ. ಆದರೆ, ಇದೇ ಅಂತಹ ವ್ಯಕ್ತಿಗಳ ಆರೋಗ್ಯಕ್ಕೆ ಕಂಟಕವಾಗುತ್ತದೆ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ.

ಚಹಾ ಮತ್ತು ಸಿಗರೇಟ್ ಎರಡೂ ಮಾನವ ದೇಹಕ್ಕೆ ಅಪಾಯವನ್ನು ಉಂಟುಮಾಡುತ್ತವೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ಈ ಅಪಾಯಗಳನ್ನು ಉಲ್ಬಣಗೊಳಿಸಬಹುದು. ಇದು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Also read: ರಾಜ್ಯದಲ್ಲೇ ಇತಿಹಾಸ ಬರೆದ ಶಿವಮೊಗ್ಗ ಪಾಲಿಕೆ | ಪೌರ ಕಾರ್ಮಿಕರ ದಸರಾ ಆಚರಿಸಿ ಮಾದರಿ
ಚಹಾದಲ್ಲಿ ಕೆಫೀನ್ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಡಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡಲು ಹೊಟ್ಟೆಯಲ್ಲಿ ಒಂದು ರೀತಿಯ ಆಮ್ಲವನ್ನು ಉತ್ಪಾದಿಸುತ್ತದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ, ಈ ಕೆಫೀನ್ ಹೊಟ್ಟೆಯ ಒಳಪದರಕ್ಕೆ ಹಾನಿ ಮಾಡುತ್ತದೆ.

ಇದಲ್ಲದೆ, ಸಿಗರೇಟ್ ಸೇದುವವರಲ್ಲಿ ಹೃದಯಾಘಾತದ ಅಪಾಯವು ಶೇ.7ರಷ್ಟು ಹೆಚ್ಚು ಎಂದು ವರದಿಗಳು ಸೂಚಿಸಿದ್ದು, ಅವರ ಜೀವಿತಾವಧಿಯು 17 ವರ್ಷಗಳವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.

- ಹೃದ್ರೋಗದ ಹೆಚ್ಚಿದ ಅಪಾಯ
- ಅನ್ನನಾಳದ ಕ್ಯಾನ್ಸರ್
- ಗಂಟಲಿನ ಕ್ಯಾನ್ಸರ್
- ಶ್ವಾಸಕೋಶದ ಕ್ಯಾನ್ಸರ್
- ದುರ್ಬಲತೆ ಮತ್ತು ಬಂಜೆತನದ ಅಪಾಯ
- ಹೊಟ್ಟೆಯ ಹುಣ್ಣುಗಳು
- ಕೈ ಕಾಲುಗಳ ಮೇಲೆ ಹುಣ್ಣು
- ಜ್ಞಾಪಕಶಕ್ತಿ (ಮೆಮೊರಿ) ನಷ್ಟ
- ಮೆದುಳು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ
- ಜೀವಿತಾವಧಿಯನ್ನು ಕಡಿಮೆ ಮಾಡುವ ಸಾಧ್ಯತೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















Discussion about this post