ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ #Shivamogga Dasara ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷರು ಎ.ಅಮೃತ್ ರಾಜ್ ಹೇಳಿದರು.
ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರ್ಥ ಪೂರ್ಣವಾದ ಪೌರ ಕಾರ್ಮಿಕರ ದಿನಾಚರಣೆಯನ್ನು ಮಾಡಿ, ನಂತರ ಪೌರ ಕಾರ್ಮಿಕರ ದಸರಾವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತಿರುವುದು ಹೆಮ್ಮೆಯ ವಿಷಯ. ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ವಿಷಯ. ಎಲ್ಲರೊಂದಿಗೂ ಉತ್ತಮ ಒಡನಾಟ ಇದೆ. ಪೌರ ಕಾರ್ಮಿಕರ ದಸರಾ ಆಚರಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರಿಗೆ ಮನವಿ ಸಲ್ಲಿಸುತ್ತೇನೆ ಪೌರ ಕಾರ್ಮಿಕರಿಗೆ ಕೂಡಲೇ ವೈದ್ಯಕೀಯ ಸೌಲಭ್ಯ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
Also read: ಹೆಚ್‌ಎಂಟಿ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ: ಕೇಂದ್ರ ಸಚಿವ ಕುಮಾರಸ್ವಾಮಿ
ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಮೊಟ್ಟ ಮೊದಲ ಪೌರ ಕಾರ್ಮಿಕರ ದಸರಾ ಮಾಡಲಾಗಿದೆ. ಪೌರ ಕಾರ್ಮಿಕರ ದಸರಾವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾವಿರಕ್ಕಿಂತ ಹೆಚ್ಚು ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಾರ್ಯಕ್ರಮಗಳು ಇನ್ನು ಬಾಕಿ ಇದ್ದು, ಗೃಹ ಭಾಗ್ಯ, ಸಮುದಾಯ ಭವನವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವವರು ಪೌರಕಾರ್ಮಿಕರು. ಪೌರ ಕಾರ್ಮಿಕರಿಗೆ ಲಗ್ನ ಭಾಗ್ಯವನ್ನು ಕೊಟ್ಟಂತಹದ್ದು ಸ್ವಚ್ಛವಾದ ನಗರ ಶಿವಮೊಗ್ಗ. ಅನೇಕ ಚಿಂತನೆ ಯೋಜನೆಗಳನ್ನು ಮಾಡಿಕೊಂಡು ಬಂದAತದ್ದು ಶಿವಮೊಗ್ಗ ನಗರ. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆ ಎದ್ದು ಕಾರ್ಯನಿರ್ವಸುವಂತವರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ದಸರಾ 2024 ರಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಸೂರ್ಯ ಚಂದ್ರ ಇರುವವರೆಗೆ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಪೌರ ಕಾರ್ಮಿಕರ ದಸರಾ ರಾಜ್ಯಕ್ಕೆ ವಿಸ್ತಾರವಾಗಿದೆ. ಯಾವುದೇ ಹಬ್ಬ ಹರಿದಿನಗಳು ಬರಲಿ ಪೌರ ಕಾರ್ಮಿಕರು ಇಲ್ಲದೆ ಆಗುವುದಿಲ್ಲ. ಯಾವುದೇ ಕಾರ್ಯಕ್ರಮ ಯಶಸ್ವಿಯಾವಾಗಲೂ ಪೌರ ಕಾರ್ಮಿಕರು ಕಾರಣ. ಅವರ ಸೇವೆ ಅತ್ಯಂತ ಪ್ರಮುಖ. ಜನರ ಆರೋಗ್ಯ ಕಾಪಾಡುವ ವೈದ್ಯರು ಪೌರ ಕಾರ್ಮಿಕರು. ಪೌರ ಕಾರ್ಮಿಕರ ಉಪಯೋಗಕ್ಕೆ ಇಟ್ಟನಂತಹ ಒಂದು ವರ್ಷದ ಸಂಪೂರ್ಣ ಹಣವನ್ನು ನೆರೆ ಪರಿಹಾರಕ್ಕೆ ಕೊಟ್ಟಂತಹವರು ಪೌರ ಕಾರ್ಮಿಕರು ಎಂದ ಅವರು, ನಮ್ಮದೇ ಆದ ಧಾರ್ಮಿಕ ಪರಂಪರೆ, ಸಾಂಸ್ಕೃತಿ ಮೇಲೆ ಇರುವಂತಹ ದೇಶ ಇದು. ಹಬ್ಬದಲ್ಲಿ ಸಂತೋಷ, ಸಡಗರ ಸಂಭ್ರಮ ಇದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ, ಶಿವಮೊಗ್ಗ ಇಡೀ ದೇಶದಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಶಿವಮೊಗ್ಗ ಯಾವಾಗಲೂ ಸಹ ಮುಂಚೂನಿಣ ಯಲ್ಲಿರುವ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಒಳ್ಳೆಯದಾದರೆ ಅದರಲ್ಲಿ ಶಿವಮೊಗ್ಗ ಜಿಲ್ಲೆ ನಿರ್ಣಾಯಕ ಪಾತ್ರ ವಹಿಸುತ್ತಿರುವುದು. ಹೆಣ್ಣು ಮಕ್ಕಳ ಮದುವೆಗೆ ತಾಳಿ ಭಾಗ್ಯ ಯೋಜನೆಯನ್ನು ರೂಪಿಸಿದೆ. ಅದಕ್ಕೆ 50 ಸಾವಿರ ರೂಪಾಯಿ ಕೊಡುತ್ತಿರುವುದು ಶಿವಮೊಗ್ಗ ಮಹಾನಗರ ಪಾಲಿಕೆ ಮಾತ್ರ. ದಸರಾ ಪೂರ್ವ ಭಾವಿ ಸಭೆಯಲ್ಲಿ ಪೌರ ಕಾರ್ಮಿಕರ ದಸರಾ ಚರ್ಚೆಯ ನಂತರ ಪೌರ ಕಾರ್ಮಿಕರ ದಸರಾ ಆಚರಣೆಗೆ ಬಂದಿದೆ. ಶಿವಮೊಗ್ಗ ಪೌರ ಕಾರ್ಮಿಕರ ದಸರಾವನ್ನು ಅತ್ಯಂತ ವೈಭವಯುತವಾಗಿ ನಡೆಸಲು ಎಲ್ಲಾರೂ ಹೆಜ್ಜೆ ಹಾಕಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ ಸಾಯಿ ಶಂಕರ್ ಮಾತನಾಡಿದರು. ವೇಣುಗೋಪಾಲ್ ಸ್ವಾಗತಿಸಿದರು. ವೇದಿಕೆಯಲ್ಲಿ ಪಾಲಿಕೆಯ ಅಮೋಘ, ಸಾಯಿ ಶಂಕರ್, ನರಸಿಂಹ, ಗಂಗಾಧರ್, ಹರೀಶ್, ಶ್ರೀಧರ್, ಮಂಜಣ್ಣ, ಸುನೀಲ್, ವಸಂತ್, ಶೈಲಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post