ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮೇ ತಿಂಗಳ ಆರಂಭಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳೇದರೂ ಇದ್ದರೆ, ಪೂರ್ವಭಾವಿಯಾಗಿ ಮುಗಿಸಿಕೊಳ್ಳುವುದು ಒಳ್ಳೆಯದು. ಕಾರಣ ಮೇ 1, 2, 3 ಕ್ರಮವಾಗಿ ಮೂರು ದಿನ ಬ್ಯಾಂಕುಗಳಿಗೆ ರಜೆ Bank Holiday ಇರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳ ರಜಾ ಪಟ್ಟಿ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ವಾರದ ಹಾಗೂ ವಿಶೇಷ ದಿನಗಳ ರಜೆಗಳನ್ನು ಸೇರಿಸಿದ್ರೆ ಮೇನಲ್ಲಿ ಒಟ್ಟು 11 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ.
ಆರ್ ಬಿಐ RBI ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದರೆ ಈ ರಜಾಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ರಾಜ್ಯಕ್ಕೆ ಸಂಬಂಧಿಸಿದ ಹಬ್ಬ ಹಾಗೂ ಆಚರಣೆಗಳ ಹಿನ್ನೆಲೆಯಲ್ಲಿ ರಜೆಗಳನ್ನು ನಿಗದಿಪಡಿಸಲಾಗುತ್ತದೆ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ.
ಮೇ ತಿಂಗಳ ರಜಾಪಟ್ಟಿ ಹೀಗಿದೆ
ಮೇ 1: ಭಾನುವಾರ
ಮೇ 2: ರಂಜಾನ್ -ಈದ್ (ಈದ್- ಉಲ್- ಫಿತರ್). ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಮೇ 3: ಭಗವನ್ ಶ್ರೀ ಪರಶುರಾಮ್ ಜಯಂತಿ/ರಂಜಾನ್ -ಈದ್ (ಈದ್- ಉಲ್- ಫಿತರ್)/ಬಸವ ಜಯಂತಿ/ಅಕ್ಷಯ ತೃತೀಯ. ಕೊಚ್ಚಿ ಹಾಗೂ ತಿರುವನಂತಪುರಂ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಮೇ ತಿಂಗಳ ರಜಾಪಟ್ಟಿ ಹೀಗಿದೆ
Also read: ಮೇ 4ರಂದು ಮಕ್ಕಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ
ಮೇ 1: ಭಾನುವಾರ
ಮೇ 2: ರಂಜಾನ್ -ಈದ್ (ಈದ್- ಉಲ್- ಫಿತರ್). ಕೇರಳದ ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಮೇ 3: ಭಗವನ್ ಶ್ರೀ ಪರಶುರಾಮ್ ಜಯಂತಿ/ರಂಜಾನ್ -ಈದ್ (ಈದ್- ಉಲ್- ಫಿತರ್)/ಬಸವ ಜಯಂತಿ/ಅಕ್ಷಯ ತೃತೀಯ. ಕೊಚ್ಚಿ ಹಾಗೂ ತಿರುವನಂತಪುರಂ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಮೇ 8: ಭಾನುವಾರ
ಮೇ 9: ರವೀಂದ್ರ ನಾಥ್ ಟ್ಯಾಗೋರ್ ಜನ್ಮದಿನ. ಪಶ್ಚಿಮ ಬಂಗಾಳದಲ್ಲಿ ರಜೆ.
ಮೇ 14: ಎರಡನೇ ಶನಿವಾರ
ಮೇ 15: ಭಾನುವಾರ
ಮೇ 16: ಬುದ್ಧ ಪೂರ್ಣಿಮಾ. ತ್ರಿಪುರ, ಬೇಲಾಪುರ್, ಮಧ್ಯ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಜಮ್ಮು, ಉತ್ತರಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಛತ್ತೀಸ್ ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಶ್ರೀನಗರದಲ್ಲಿ ಬ್ಯಾಂಕುಗಳಿಗೆ ರಜೆ.
ಮೇ 22: ಭಾನುವಾರ
ಮೇ 28: ನಾಲ್ಕನೇ ಶನಿವಾರ
ಮೇ 29: ಭಾನುವಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post