ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಒಂದು ವರ್ಷದ ಸುರಿಯುವ ಮಳೆ ದುಬೈನಲ್ಲಿ #Rain in Dubai ಒಂದೇ ದಿನದಲ್ಲಿ ಸುರಿದಿದ್ದು, ರಣಮಳೆಗೆ ಅರಬ್ ದೇಶ #Arabh Country ಅಕ್ಷರಶಃ ತತ್ತರಿಸಿ ಹೋಗಿದೆ.
ಮಳೆಗಾಗಿ ದುಬೈನಲ್ಲಿ ಇತ್ತೀಚೆಗೆ ಮೋಡಬಿತ್ತನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರ ಭಾರೀ ಮಳೆ ಹಾಗೂ ಚಂಡಮಾರುತ ಅಪ್ಪಳಿಸಿದ್ದು, ಅಕ್ಷರಶಃ ನಲುಗಿ ಹೋಗಿದೆ.
ಯುಎಇ ಮತ್ತು ಬಹ್ರೇನ್’ನಾದ್ಯಂತ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ ಮತ್ತು ಒಮಾನ್’ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.
Also read: ಪ್ರಚಂಡ ಕುಳ್ಳ ಪಂಚಭೂತಗಳಲ್ಲಿ ಲೀನ | ಬ್ರಾಹ್ಮಣ ಸಂಪ್ರದಾಯದಂತೆ ದ್ವಾರಕೀಶ್ ಅಂತ್ಯಕ್ರಿಯೆ
ಯುಎಇ #UAE ತುಂಬೆಲ್ಲಾ ಧಾರಾಕಾರ ಮಳೆಯು ಮರುಭೂಮಿ ದೇಶದ ಸುತ್ತಲೂ ವ್ಯಾಪಕವಾದ ಪ್ರವಾಹವನ್ನು ಉಂಟುಮಾಡಿದೆ. ಪ್ರವಾಹ ಪರಿಸ್ಥಿತಿಯ ಕಾರಣದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಶಾಲೆಗಳನ್ನು ಮುಚ್ಚಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post