ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್ ಗೆ ಹಸಿರು ಅಮೋನಿಯಾ ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದೆ.
ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಭಾರಿ ಹಸಿರು ಅಮೋನಿಯ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ.

Also read: ಆ.28-31ರಾಷ್ಟ್ರೀಯ ಯುವ ನಾಯಕತ್ವ ಶಿಬಿರ: ಕುವೆಂಪು ವಿವಿ ಎನ್‌ಎಸ್‌ಎಸ್ ಸಹಭಾಗಿತ್ವ
ಭಾರತದಲ್ಲಿ ಹಸಿರು ಅಮೋನಿಯಾ ಉತ್ಪಾದನೆಗೆ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮುಂದಾಗಿದ್ದು, ಇದಕ್ಕಾಗಿದೇಶದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಸಿರು ಅಮೋನಿಯಾ ರಫ್ತು ಮಾಡುವ ಜಪಾನ್ ನೊಂದಿಗಿನ ಒಪ್ಪಂದ ನಿದರ್ಶನ ಎಂದು ಹೇಳಿದರು.
7.5 ಲಕ್ಷ ಟಿಪಿಎ ಗೆ ಟೆಂಡರ್: ಪ್ರಸ್ತುತದಲ್ಲಿ ಗ್ರೀನ್ ಅಮೋನಿಯಾದ 7.5 ಲಕ್ಷ ಟಿಪಿಎಗೆ ಟೆಂಡರ್ ಆಗಿದೆ. 4.5 ಲಕ್ಷ ಟಿಪಿಎ ಸಾಮರ್ಥ್ಯಕ್ಕೆ ಹೆಚ್ಚುವರಿ ಟೆಂಡರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.
1 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ: ಭಾರತದಲ್ಲಿ ವಾರ್ಷಿಕ ಒಂದು ಮಿಲಿಯನ್ ಟನ್ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಹಸಿರು ಶಕ್ತಿ ಉತ್ಪಾದನೆಯಲ್ಲಿ ಭಾರತ ತ್ವರಿತ ಮತ್ತು ಅಭೂತಪೂರ್ವ ಸಾಧನೆ ತೋರುತ್ತಿದೆ ಎಂದರು.
ಭಾರತ, ಜಪಾನ್ ಮತ್ತು ಸಿಂಗಾಪುರ ಈ ಮೂರು ದೇಶಗಳು ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಸಹಯೋಗ ಮಾಡುತ್ತಿವೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post