ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮಹತ್ವಾಕಾಂಕ್ಷೆಯ “ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ” ಬಗ್ಗೆ ಸರಿ ಪ್ರಚಾರ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Pralhad Joshi ಆರೋಪಿಸಿದರು.
ಜೈಪುರದಲ್ಲಿ ‘ಸುಸ್ಥಿರ ಇಂಧನ ಆರ್ಥಿಕತೆಯತ್ತ ಪರಿವರ್ತನೆ’ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ಕೆಲ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳ ನಿರ್ಲಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಉಚಿತ ವಿದ್ಯುತ್ ಭರವಸೆ ನೀಡಿತು, ಆದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ತೀವ್ರ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದರು.
200 ಯುನಿಟ್ ಉಚಿತ ವಿದ್ಯುತ್ ಒಂದು ತಂತ್ರವಷ್ಟೇ: 200 ಯೂನಿಟ್ ಉಚಿತ ವಿದ್ಯುತ್ ಜನರ ಕಣ್ಣಿಗೆ ಮಣ್ಣೆರೆಚ್ಚುವ ಒಂದು ತಂತ್ರಗಾರಿಕೆ ಆಗಿದೆ ಅಷ್ಟೇ ಎಂದು ಟೀಕಿಸಿದರು.
Also read: ಯಾರೇ ಪುಂಡಾಟ ಮಾಡಿದ್ರೂ ಸುಮ್ಮನಿರಲ್ಲ: ಸಿಎಂ ಸಿದ್ದರಾಮಯ್ಯ
200 ಯುನಿಟ್ ಉಚಿತ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಅಷ್ಟು ಕೊಡುವುದೇ ಇಲ್ಲ. ಅಲ್ಲದೇ, ಉಳಿದವರಿಗೆ ವಿದ್ಯುತ್ ಶುಲ್ಕವನ್ನೂ ಮಿತಿಮೀರಿ ಏರಿಸಿದ್ದಾರೆ. 10 ರೂ, 11 ರೂ, 12 ರೂಪಾಯಿ ಹೀಗೆ ಮನಸೋ ಇಚ್ಛೆ ಹೆಚ್ಚಳ ಮಾಡಿದ್ದಾರೆ. ಕೈಗಾರಿಕೆ, ವಾಣಿಜ್ಯ ಬಳಕೆದಾರರಿಗೂ ವಿದ್ಯುತ್ ದರ ಏರಿಕೆಯ ಬರೆ ಎಳೆದಿದ್ದಾರೆ ಎಂದು ಉಚಿತ ವಿದ್ಯುತ್ ಮಹಿಮೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಸಚಿವ ಜೋಶಿ.
ವಿದ್ಯುತ್ ದರ ಏರಿಕೆ #Electricity Price Hike ಮತ್ತು ವಿದ್ಯುತ್ ಕಡಿತದಿಂದ ಬೇಸತ್ತ ಉದ್ಯಮಿಯೊಬ್ಬರು 5000 ಚದರಡಿಯ ತಮ್ಮ ಮೂರು ಶೆಡ್ ಗಳಿಗೆ “ಸೂರ್ಯ ಘರ್” ಅಳವಡಿಸಿಕೊಡುವಂತೆ ತನ್ನನ್ನು ಕೋರಿದರು. ಅಂಥ ಪರಿಸ್ಥಿತಿ ತಲೆದೋರಿದೆ ಉಚಿತ ವಿದ್ಯುತ್ ಪೂರೈಕೆಯ ರಾಜ್ಯಗಳಲ್ಲಿ ಎಂದು ಹೇಳಿದರು ಜೋಶಿ.
ನಿಜವಾಗಿ ಉಚಿತ ವಿದ್ಯುತ್ ಅಂದ್ರೆ ಸೂರ್ಯ ಘರ್ : ನಿಜವಾಗಿ ಉಚಿತ ವಿದ್ಯುತ್ ಪೂರೈಸುವ ಯೋಜನೆ ಎಂದರೆ ಅದು “ಸೂರ್ಯ ಘರ್” ಎಂದು ಪ್ರತಿಪಾದಿಸಿದ ಸಚಿವರು, 3 ಕೆವಿ ವಿದ್ಯುತ್ ಉತ್ಪಾದನೆ ಘಟಕಕ್ಕೆ ಕೇಂದ್ರ ಸರ್ಕಾರ 78,000 ರೂ.ವರೆಗೆ ಸಹಾಯಧನ ನೀಡಲಿದೆ. ಅಲ್ಲದೇ, ಬಳಸಿ ಉಳಿದ ವಿದ್ಯುತ್ ಮಾರಾಟದ ಮೂಲಕ ಆದಾಯಕ್ಕೂ ಅವಕಾಶ ಕಲ್ಪಿಸಿದೆ. ಸೋಲಾರ್ ಪ್ಲ್ಯಾಂಟ್ ಅಳವಡಿಕೆಗೆ ಬ್ಯಾಂಕ್ ಸಾಲ ಸೌಲಭ್ಯಕ್ಕೂ ಅನುವು ಮಾಡಿಕೊಟ್ಟಿದೆ ಎಂದು ಸಚಿವ ಜೋಶಿ ವಿವರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ “ಸೂರ್ಯ ಘರ್ ಮುಫ್ತ್ ಬಿಜ್ಲಿ” ಮಹತ್ವಾಕಾಂಕ್ಷೆಯ ಯೋಜನೆ ಆಗಿದ್ದರೂ ಕಾಂಗ್ರೆಸ್ ಆಡಳಿತದ ರಾಜ್ಯಗಳು ಸರಿಯಾಗಿ ಪ್ರಮೋಟ್ ಮಾಡುತ್ತಿಲ್ಲ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post