ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತಿಂಗಳ ಮೊದಲ ದಿನ ದೇಶದ ಜನರಿಗೆ ಗುಡ್ ನ್ಯೂಸ್ #Good News ದೊರೆತಿದ್ದು, ವಾಣಿಜ್ಯ ಬಳಕೆಯ ಎಲ್’ಪಿಜಿ ಸಿಲಿಂಡರ್ #LPG Cylinder ದರದಲ್ಲಿ ಸತತ 4ನೇ ಬಾರಿ ಇಳಿಕೆ ಮಾಡಲಾಗಿದೆ.
ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪೆನಿಗಳು ಬೆಲೆಯನ್ನು ಇಳಿಕೆ ಮಾಡಿದ್ದು, ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಯಾದ ಇಂಡಿಯನ್ ಆಯಿಲ್ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ.
Also read: PM Modi congratulates T20 World cup winning Indian Cricket Team over phone call
ದೇಶದ ಮೆಟ್ರೋ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ ಬೆಲೆ ರೂ.31 ಇಳಿಕೆಯಾಗಿದ್ದು, ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, 14.2 ಕೆಜಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಬದಲಾಗಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post