ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಕ್’ನಲ್ಲಿ #Ladakh ಐದು ಹೊಸ ಜಿಲ್ಲೆಗಳಲ್ಲಿ ರಚನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಅವರು, ಲಡಾನ್’ನಲ್ಲಿ ಹೊಸ ಜಿಲ್ಲೆಗಳಲ್ಲಿ ರಚನೆ ಮಾಡಲು ಗೃಹ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಹೊಸ ಜಿಲ್ಲೆಗಳು ಸರ್ಕಾರವು ಒದಗಿಸುವ ಪ್ರಯೋಜನಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತವೆ ಎಂದಿದ್ದಾರೆ.
Also read: ಜೈಲಿನಲ್ಲಿ ದರ್ಶನ್’ಗೆ ರಾಜಾತಿಥ್ಯ | ಕೆಂಡಾಮಂಡಲರಾಗಿರುವ ಸಿಎಂ ಸಿದ್ದರಾಮಯ್ಯ
ಹೊಸ ಜಿಲ್ಲೆಗಳು ಝನ್ಸಂಷ್ಕರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ಥಾಂಗ್ ಸೇರಿವೆ. ಈ ಮೂಲಕ ಜನರಿಗೆ ಆಡಳಿತಾತ್ಮಕ ಪ್ರಯೋಜನಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುಲಾಗುವುದು. ಲಡಾಖ್ ಜನರಿಗೆ ಹೇರಳವಾದ ಅವಕಾಶಗಳನ್ನು ಸೃಷ್ಟಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post