ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಹಾರ ಹಂಚಿಕೆ ಪ್ರಮಾಣ ಹೆಚ್ಚಿಸುವ ಸಂಬಂಧ ಭಾರತ ಮತ್ತು ಅರ್ಜೆಂಟೀನಾ #India-Arjentina ಮಧ್ಯೆ ಪರಸ್ಪರ ಚರ್ಚೆ ನಡೆದಿದೆ.
ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ #Prahlad Joshi ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿದೆ.
ಉಭಯ ರಾಷ್ಟ್ರಗಳಲ್ಲೂ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಗೆ ಬೇಕಿರುವ ಅಗತ್ಯ ಸಹಕಾರ ಕುರಿತು ಚರ್ಚಿಸಲಾಯಿತು.
ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ – ಅರ್ಜೆಂಟೀನಾ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ, ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post