ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ ಮೇಲೆ ಭಾರತೀಯ ಸೇನೆ #Indian Army ನಡೆಸಿದ ದಾಳಿಯಲ್ಲಿ ಮಸೂದ್ ಅಜರ್‌ನ #Masood Azar ಪತ್ನಿ, ಮಗ ಮತ್ತು ಅಕ್ಕ ಸೇರಿದಂತೆ ಅವನ ಇಡೀ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಮಸೂದ್‌ನ ಅಕ್ಕ, ಭಾವ ಮತ್ತು ನಾಲ್ವರು ಆಪ್ತ ಸಹಾಯಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ತನ್ನ ಕುಟುಂಬ ನಾಶವಾದ ನಂತರ ಮಸೂದ್ ಅಜರ್ ತುಂಬಾ ಅಸಮಾಧಾನಗೊಂಡಿದ್ದು, ‘ನಾನು ಕೂಡ ಸತ್ತಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಮೃತರನ್ನು ಮೌಲಾನಾ ಕಾಶಿಫ್ ಅವರ ಕುಟುಂಬ, ಮೌಲಾನಾ ಅಬ್ದುಲ್ ರೌಫ್ ಅವರ ಹಿರಿಯ ಮಗಳು, ಮೊಮ್ಮಗ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















