ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಎನ್’ಡಿಎ #NDA ಒಟ್ಟಾಗಿ ಸಾಗಿ ಲೋಕಸಭಾ ಚುನಾವಣೆಯಲ್ಲಿ #Lok Sabha Election ಗೆಲುವು ಸಾಧಿಸಿರುವ ನಿತೀಶ್ ಕುಮಾರ್ #Nitish Kumar ನೇತೃತ್ವದ ಜೆಡಿಯು #JDU ಮೋದಿ #Modi ನೇತೃತ್ವಕ್ಕೆ ಕೈ ಕೊಡುತ್ತಾರಾ ಎಂಬ ಅನುಮಾನಗಳು ಇಂದು ಮುಂಜಾನೆಯ ಬೆಳವಣಿಗೆಯಿಂದ ವ್ಯಕ್ತವಾಗಿದೆ.
ಎನ್’ಡಿಎ ಸರ್ಕಾರ ರಚಿಸಲು ಟಿಡಿಪಿ ಹಾಗೂ ಜೆಡಿಯು ಪಕ್ಷಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆಯಿದ್ದು ಇದೇ ಎರಡೂ ಪಕ್ಷಗಳಿಗೆ ಅಡ್ವಾಂಟೇಜ್ ಆಗಿ ಪರಿಣಮಿಸಿದೆ.
ಟಿಡಿಪಿ #TDP ನೇತೃತ್ವದ ಚಂದ್ರಬಾಬು ನಾಯ್ಡು #Chandrababu Naidu ತಾವು ಎನ್’ಡಿಎ ಜೊತೆಯಲ್ಲೇ ಇರುವುದಾಗಿ ಇಂದು ಮುಂಜಾನೆಯ ಸುದ್ದಿಗೋಷ್ಠಿಯಲ್ಲೂ ಸಹ ಸ್ಪಷ್ಟಪಡಿಸಿದ್ದಾರೆ.
Also read: ಟಿಡಿಪಿ ಎನ್’ಡಿಎ ಜೊತೆಗಿದೆಯಾ? ಚಂದ್ರಬಾಬು ನಾಯ್ಡು ಬಿಗ್ ಸ್ಟೇಟ್ಮೆಂಟ್
ಆದರೆ, ನಿತೀಶ್ ಕುಮಾರ್ ಅವರ ಇಂದಿನ ಬೆಳವಣಿಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ, ಇಂದು ಮುಂಜಾನೆ ಬಿಹಾರದಿಂದ ದೆಹಲಿಗೆ ನಿತೀಶ್ ಕುಮಾರ್ ಹಾಗೂ ಆರ್’ಜೆಡಿ ನಾಯಕ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದ್ದರೂ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post