ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮುಂಬರುವ ಲೋಕಸಭಾ ಚುನಾವಣೆಯ Lok Sabha Election ದಿನಾಂಕ ಮಾರ್ಚ್ 9ರಂದು ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಎಪ್ರಿಲ್ ಎರಡನೆಯ ವಾರದಲ್ಲಿ ಹಲವು ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಹಿಂದಿನ ಎರಡು ಚುನಾವಣೆಗಳ ವೇಳಾಪಟ್ಟಿಯನ್ನು ಗಮನಿಸಿ, ಅಧಿಕಾರಿಗಳು ನಡೆಸುತ್ತಿರುವ ಸತತ ಸಭೆಗಳ ಆಧಾರದ ಮಾಹಿತಿಯಂತೆ ಮಾರ್ಚ್ 9 ರಂದು ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿದ್ದು, ಎಪ್ರಿಲ್ 2ನೆಯ ವಾರದಲ್ಲಿ ಹಲವು ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆಯದೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಹಂತದಲ್ಲಿ, ಬಿಹಾರದಲ್ಲಿ ಮೂರು, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಜಮ್ಮು ಕಾಶ್ಮೀರದಲ್ಲಿ 5 ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
Also read: ಫೆ.23: ಶಿವಮೊಗ್ಗದ ಪ್ರತಿಷ್ಠಿತ ಭಾರತೀಯಂ ಹಾಗೂ ಅಜಿತಶ್ರೀ ಪುರಸ್ಕಾರ ಪ್ರದಾನ
ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಹಲವು ತಂಡ ಅಂತಿಮ ಪರಿಶೀಲನೆಗಾಗಿ ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಲೋಕಸಭಾ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭೆಗೆ ಮತದಾನ ನಡೆಸಲು ಆಯೋಗ ಸಿದ್ದವಾಗುತ್ತಿದ್ದು, ಇದರೊಂದಿಗೇ ಕೇಂದ್ರಾಡಳಿತ ಪ್ರದೇಶಗಳಿಗೂ ಚುನಾವಣೆ ನಡೆಸುವ ಸಾಧ್ಯತೆಯನ್ನೂ ಸಹ ಆಯೋಗ ಪರಿಶೀಲನೆ ನಡೆಸುತ್ತಿದೆ.
ಜಮ್ಮು ಕಾಶ್ಮೀರ ಭದ್ರತಾ ಪರಿಸ್ಥಿತಿ ಮತ್ತು ಪಡೆಗಳ ಲಭ್ಯತೆಯ ಬಗ್ಗೆ ಪರಿಶೀಲಿಸಲು ಪ್ರತಿನಿಧಿಗಳು ಮಾರ್ಚ್ 8-9 ರಂದು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಮಾರ್ಚ್ 12-13 ರಂದು ಚುನಾವಣಾಧಿಕಾರಿಗಳ ತಂಡ ಮತ್ತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಲೋಕಸಭೆ ಚುನಾವಣೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಬಹುದೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.
ಹಿಂದೆ ಯಾವ ದಿನಾಂಕಕ್ಕೆ ನಡೆದಿತ್ತು ಚುನಾವಣೆ?
2019ರ ಲೋಕಸಭೆ ಚುನಾವಣೆಯ ದಿನಾಂಕವನ್ನು 2019ರ ಮಾರ್ಚ್ 10 ರಂದು ಆಯೋಗ ಘೋಷಣೆ ಮಾಡಿತ್ತು. ಎ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post