ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ಇರುವ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಇಂಟರ್’ನೆಟ್ ಸೌಲಭ್ಯ #Internet Facility for Govt High School ಕಲ್ಪಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2025-26ರ ಸಾಲಿನ ಬಜೆಟ್ #Union Budget 2025-26 ಭಾಷಣದಲ್ಲಿ ಈ ಕುರಿತಂತೆ ಘೋಷಣೆ ಮಾಡಿರುವ ಅವರು, ದೇಶದಾದ್ಯಂತ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಇಂಟರ್’ನೆಟ್ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಯವ್ಯಯದಲ್ಲಿ ಅನುದಾನ ಇರಿಸಲಾಗಿದೆ ಎಂದಿದ್ದಾರೆ.

50 ಕೋಟಿ ಶಾಲೆಗಳಲ್ಲಿ ಅಟಲ್ ಠಿಂಕರಿAಗ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಅನುದಾನ ಮೀಸಲಿಟ್ಟಿದೆ.
Also read: ಬಜೆಟ್ ಆರಂಭದ ವೇಳೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ | ತಲೆಕೆಡಿಸಿಕೊಳ್ಳದೇ ಆಯವ್ಯಯ ಮಂಡನೆ

ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ #Nirmala Sitaraman ಅವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಿದಾಕ್ಷಣ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಬಜೆಟ್ ಮಂಡನೆ ವೇಳೆ ಈ ರೀತಿ ಗದ್ದಲ, ಘೋಷಣೆ ಕೂಗುವುದು ಸರಿಯಲ್ಲ. ಸಂವಿಧಾನಾತ್ಮಕವಾಗಿರುವ ಈ ಪ್ರತಿಕ್ರಿಯೆಗೆ ಸಂಸತ್’ನಲ್ಲಿರುವ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರೂ ಸಹ ಪ್ರತಿಪಕ್ಷಗಳು ತಲೆಕೆಡಿಸಿಕೊಳ್ಳದೇ ಗದ್ದಲು ಮುಂದುವರೆಸಿದರು.

ಆದರೆ, ಪ್ರತಿಪಕ್ಷಗಳ ಗದ್ದಲ ಮುಂದುವರೆದಿದ್ದರೂ ಸಹ ತಲೆ ಕೆಡಿಸಿಕೊಳ್ಳದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆ ಆರಂಭಿಸಿದರು.
ಇದರಿಂದಾಗಿ ಇನ್ನಷ್ಟು ಆಕ್ರೋಶಗೊಂಡ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿರುವ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post