ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ಮೋದಿ ನೇತೃತ್ವದ ನಮ್ಮ ಸರ್ಕಾರ ಎಲ್ಲಾ ಅರ್ಹ ನಿರಾಶ್ರಿತರಿಗೆ ಪೌರತ್ವ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತಂತೆ ಎಎನ್’ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮೋದಿ ಸರ್ಕಾರವು ಎಲ್ಲಾ ಅರ್ಹ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಿದೆ. ಸಿಎಎ ಪೌರತ್ವವನ್ನು ನೀಡುವ ಕಾನೂನಾಗಿದ್ದು, ಅದು ಯಾರ ಪೌರತ್ವವನ್ನು ಕಸಿದುಕೊಳ್ಳುವ ಕಾನೂನಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ PM Narendra Modi ನಾಯಕತ್ವದಲ್ಲಿ, ಬಿಜೆಪಿ ಸರ್ಕಾರವು ತನ್ನ 2019 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಎ ಅನುಷ್ಠಾನದ ಬಗ್ಗೆ ಪ್ರಸ್ತಾಪಿಸಿತ್ತು, ಈಗ 2024 ಲೋಕಸಭೆ ಚುನಾವಣೆ ಮುನ್ನ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ Amith Shah ಅವರ ನುರಿತ ಮಾರ್ಗದರ್ಶನದಲ್ಲಿ ಸಿಎಎಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಸಿಎಎ ಬಿಜೆಪಿಗೆ ಮಾನವೀಯತೆಯ ವಿಷಯವಾಗಿದೆಯೇ ಹೊರತು ರಾಜಕೀಯ ಲಾಭದ ವಿಷಯವಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ರಾಹುಲ್ ಗಾಂಧಿಯಿಂದ ಓವೈಸಿವರೆಗೆ ಮತ್ತು ಅರವಿಂದ್ ಕೇಜ್ರಿವಾಲ್’ನಿಂದ ಮಮತಾ ಬ್ಯಾನರ್ಜಿವರೆಗೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಸುಳ್ಳಿನ ರಾಜಕೀಯದಲ್ಲಿ ತೊಡಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರನ್ನು ವಿರೋಧಿಸುವ ಬದಲು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಿರಾಶ್ರಿತರ ವಿರುದ್ಧ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿದ್ದಾರೆ. ಮಮತಾ ಬ್ಯಾನರ್ಜಿ Mamatha Banarjee ಸಿಎಎ CAA ವಿರೋಧಿಸುವ ಬದಲು ಒಳನುಸುಳುವಿಕೆಯನ್ನು ತಡೆಯುವತ್ತ ಗಮನಹರಿಸಬೇಕು. ಮಮತಾ ಬ್ಯಾನರ್ಜಿಯವರು ತಮ್ಮ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಬಿತ್ತಲು ಬಯಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ವರ್ಚಸ್ಸು ಹಿಗ್ಗುತ್ತಿದ್ದು, ಬಿಜೆಪಿ ಸರ್ಕಾರ ಬರುವ ದಿನ ದೂರವಿಲ್ಲ ಎಂದ ಶಾ, ಒಳನುಸುಳುವಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಎಎ ಜಾರಿಗೊಳಿಸುವುದಿಲ್ಲ ಎಂದು ಪ್ರತಿಪಾದಿಸುವ ಕೆಲ ರಾಜ್ಯಗಳಿಗೆ ಅಮಿತ್ ಶಾ ಅವರು ‘ಪೌರತ್ವ ಕಾನೂನು ಕೇಂದ್ರ ಸರ್ಕಾರಕ್ಕೆ ಸಂಬAಧಿಸಿದ ವಿಷಯ, ರಾಜ್ಯಗಳ ವಿರೋಧಕ್ಕೆ ಯಾವುದೇ ಆಧಾರವಿಲ್ಲ’ ಎಂದು ಸ್ಪಷ್ಟ ಸಂದೇಶ ನೀಡಿದರು.
Also read: ಕರ್ನಾಟಕ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಎಸ್. ರವಿಕುಮಾರ್ ನೇಮಕ
ಪೌರತ್ವ ತಿದ್ದುಪಡಿ ಕಾಯಿದೆಯು ಡಿ. 31, 2014 ರ ಮೊದಲು ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಲಕ್ಷಾಂತರ ನಿರಾಶ್ರಿತರಿಗೆ ಹಕ್ಕುಗಳನ್ನು ನೀಡುವುದರ ಕುರಿತಾಗಿದೆ ಎಂದು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಇದು ಅವರ ಕಷ್ಟಗಳಿಗೆ ಅಂತ್ಯ ಹಾಡಿ, ಅವರ ಮೂರು ತಲೆಮಾರುಗಳಿಗೆ ನ್ಯಾಯ ಒದಗಿಸಲಿದೆ. ಕಾಂಗ್ರೆಸ್ ಇದನ್ನು ಎಂದಿಗೂ ಮಾಡುತ್ತಿರಲಿಲ್ಲ. ಈ ಕಾನೂನು ಜಾರಿಗೆ ಬಂದಾಗಿನಿಂದಲೂ, 75 ವರ್ಷಗಳ ನಿರಾಶ್ರಿತರ ನೋವನ್ನು ಕೊನೆಗಾಣಿಸಲು ಮೋದಿ-ಶಾ ಜೋಡಿಯ ಶ್ರಮ ಸ್ಪಷ್ಟವಾಗಿ ಕಾಣುತ್ತಿದೆ.
ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಭಾರತೀಯ ರಾಜಕೀಯದ ಚಾಣಕ್ಯ, ಅಮಿತ್ ಶಾ ಅವರ ಕಾರ್ಯಶೈಲಿಯು ಇಂಡಿ ಒಕ್ಕೂಟ ಅಧಿಕಾರಕ್ಕೆ ಬರುವುದನ್ನು ತಡೆಯುವುದಲ್ಲದೇ, ಸಿಎಎ ಜಾರಿಯಾಗುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಯಾವುದೇ ಮುಸಲ್ಮಾನರಿಗೂ ಭಾರತೀಯ ಪೌರತ್ವದ ಬಾಗಿಲು ಸದಾ ತೆರೆದಿರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಸರ್ಜಿಕಲ್ ಸ್ಟ್ರೈಕ್, ವೈಮಾನಿಕ ದಾಳಿ, ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಖ್ ರದ್ದತಿ ಇತ್ಯಾದಿಗಳಲ್ಲಿ ಕಂಡುಬಂದಂತೆತೆ ಮೋದಿ ಸರ್ಕಾರದ ಪ್ರತಿಯೊಂದು ನಿರ್ಧಾರವನ್ನು ವಿರೋಧಿಸುವುದು ಪ್ರತಿಪಕ್ಷಗಳಿಗೆ ಅಭ್ಯಾಸವಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ನಿರ್ಣಾಯಕವಾಗಿ ಸೋಲಿಸಲು, ಮೋದಿ ಸರ್ಕಾರದ ಸಾಧನೆಗಳೊಂದಿಗೆ ಭಾರತದ ರಾಜಕೀಯದ ಚಾಣಕ್ಯ ಮತ್ತೊಮ್ಮೆ ಚುನಾವಣಾ ಕಣಕ್ಕೆ ಪ್ರವೇಶಿಸಿದ್ದಾರೆ. ಶಾ ಅಖಾಡಕ್ಕೆ ಇಳಿದರೆ ಕಮಲ ಅರಳುವುದು ಖಚಿತ ಎಂಬುದು ವಿರೋಧ ಪಕ್ಷಗಳಿಗೂ ಗೊತ್ತಿದೆ. ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಮಿತ್ ಶಾ’ ಚಾಣಾಕ್ಷತೆ ಸಾಕು. ಕಳೆದ 10 ವರ್ಷಗಳ ಸಾಧನೆಯ ಆಧಾರದ ಮೇಲೆ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಮನಸ್ಸು ನಿರ್ಧರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post