ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉತ್ತಮ ಭವಿಷ್ಯದ ದೃಷ್ಠಿಯಿಂದ ಒಂದೇ ಒಂದು ಗ್ರಾಂ ಡ್ರಗ್ಸ್ ಸಹ ದೇಶದೊಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ #Amith Shah ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 7ನೇ ಅಪೆಕ್ಸ್ ಲೆವೆಲ್ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ ಸಭೆಯ ಅಧ್ಯP್ಷÀತೆ ವಹಿಸಿ ಅವರು ಮಾತನಾಡಿದರು.
Also read: ಪತ್ರಿಕೆ, ಸುದ್ದಿ ಮಾಧ್ಯಮಗಳಿಂದ ಸಮಾಜದಲ್ಲಿ ಜಾಗೃತಿ ಸಾಧ್ಯ: ರಾಧಾಕೃಷ್ಣ ತೋಡಿಕಾನ
ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ ಗೃಹ ಸಚಿವರು, ಡ್ರಗ್ಸ್ ಪೂರೈಕೆ ಸರಪಳಿ ಕಿತ್ತುಹಾಕಲು ನಿರ್ದಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳಿಗೆ ಸಲಹೆ ನೀಡಿದ್ದಾರೆ.
ತೀರಾ ಇತ್ತೀಚೆಗೆ ಡ್ರಗ್ಸ್ ಸಿಂಡಿಕೇಟ್’ಗಳು ಸಮುದ್ರ ಗಡಿಯ ಮೂಲಕ ದೇಶವನ್ನು ಪ್ರವೇಶಸಲು ಪ್ರಯತ್ನಿಸುತ್ತಿವೆ. ಅಧಿಕಾರಿಗಳು ಈ ಡ್ರಗ್ಸ್ ಗಮ್ಯಸ್ಥಾನಗಳ ಬಗ್ಗೆ ಆಕಸ್ಮಿಕವಾಗಿ ನನಗೆ ಹೇಳುತ್ತಿದ್ದರು. ಎಲ್ಲಿಂದಲೇ ಆಗಲಿ ಒಂದೇ ಒಂದು ಗ್ರಾಂ ಡ್ರಗ್ಸ್ ಭಾರತಕ್ಕೆ ಬರಲು ಬಿಡುವುದಿಲ್ಲ ಎಂದು ನಾವು ನಿರ್ಣಯ ಮಾಡಬೇಕು. ಭಾರತದ ಗಡಿಗಳನ್ನು ಯಾವುದೇ ರೀತಿಯಲ್ಲಿ ಮಾದಕವಸ್ತು ವ್ಯಾಪಾರಕ್ಕೆ ಬಳಸಿಕೊಳ್ಳಲು ಅನುಮತಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















