ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ಅಪಾಯಕಾರಿಯಾಗಿರುವ 23 ವಿದೇಶಿ ತಳಿಯ ಶ್ವಾನಗಳ ಮಾರಾಟ ಹಾಗೂ ಸಂತಾನೋತ್ಪತ್ತಿಗೆ ನಿಷೇಧ ಹೇರಲಾಗಿದೆ.
ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಹಲವು ಜನರ ಮೇಲೆ ದಾಳಿ ಮಾಡಿರುವ ಪಿಟ್ಬುಲ್ ಟೆರಿಯರ್, ಅಮೆರಿಕನ್ ಬುಲ್ಡಾಗ್, ಕಂಗಾಲ್, ರಷ್ಯನ್ ಶೆಫರ್ಡ್ ಸೇರಿ ಒಟ್ಟು 23 ಬಗೆಯ ಅಪಾಯಕಾರಿ ವಿದೇಶಿ ಶ್ವಾನ ತಳಿಗಳನ್ನು ನಿಷೇಧಿಸಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಲಾಗಿದ್ದು, ಅಪಾಯಕಾರಿ ತಳಿಯ ಶ್ವಾಸನಗಳ ಆಮದಿನ ಮೇಲೂ ನಿರ್ಬಂಧ ಹೇರಲು ಮುಂದಾಗಿದೆ. ಅಲ್ಲದೇ ಪ್ರಮುಖವಾಗಿ, ಅಪಾಯಕಾರಿ ತಳಿಯ ನಾಯಿಗಳ ಸಾಕಾಣೆಯ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಸೂಚಿಸಲಾಗಿದೆ.
Also read: ಬಿಗ್ ಬಾಸ್ ತುಕಾಲಿ ಸಂತೋಷ್ ಹೊಸ ಕಾರು ಅಪಘಾತ | ಆಟೋ ಚಾಲಕ ದುರ್ಮರಣ
ಯಾವೆಲ್ಲಾ ಶ್ವಾನ ತಳಿ ನಿಷೇಧ?
ಪಿಟ್ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್ ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್ ಬುಲ್ ಡಾಗ್, ಬೋರ್ ಬೋಯಲ್, ಕಂಗಾಲ್, ರಷ್ಯನ್ ಶೆಫರ್ಡ್, ಟೊರ್ನ್ ಜಾಕ್, ಸರ್ಪ್ ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಕ್ಸ್, ರಾಟ್ ವೀಲರ್, ಟೆರಿಯರ್ಗಳು ರಿಡ್ಜ್ ಬ್ಯಾಕ್, ವೂಲ್ಫ್ ಡಾಗ್ಸ್, ಕೆನರಿಯೊ, ಅಕ್ಷಾಶ್, ಮಾಸ್ಕೊ ಗಾರ್ಡ್, ಕೇನ್ ಕೊಸೊರ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post