ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿಶ್ವ ವನ್ಯಜೀವಿ ದಿನಾಚರಣೆಯ #World Wildlife Day ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ #PM Narendra Modi ಇಂದು ಬೆಳಿಗ್ಗೆ ಗುಜರಾತ್‌ನ ಜುನಾಗಢ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿಗೆ ತೆರಳಿದ್ದರು. ಹಚ್ಚ ಹಸಿರಿನ ಕಾಡಿನ ಮೂಲಕ ರೋಮಾಂಚಕ ಸವಾರಿ ಮಾಡಿದರು, ಅಲ್ಲಿ ಅವರು ಈ ಭವ್ಯ ಜೀವಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಮುಕ್ತವಾಗಿ ತಿರುಗಾಡುವುದನ್ನು ವೀಕ್ಷಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಫಾರಿಯ ಅನುಭವವನ್ನು ಹಂಚಿಕೊಂಡಿದ್ದು, ವಿಶ್ವ ವನ್ಯಜೀವಿ ದಿನಾಚರಣೆ ಪ್ರಯುಕ್ತ ಇಂದು ಬೆಳಿಗ್ಗೆ, ನಾನು ಗಿರ್‌ನಲ್ಲಿ ಸಫಾರಿಗೆ ತೆರಳಿದ್ದು, ನಮಗೆಲ್ಲರಿಗೂ ತಿಳಿದಿರುವಂತೆ, ಗಿರ್ ಅಭಯಾರಣ್ಯ ಭವ್ಯವಾದ ಏಷ್ಯನ್ ಸಿಂಹಗಳಿಗೆ ನೆಲೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.
Also read: ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಸಂಚು | ಗ್ರೆನೇಡ್ ಸಹಿತ ಶಂಕಿತ ಉಗ್ರ ಅಬ್ದುಲ್ ಬಂಧನ
ಇದೇ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ವನ್ಯಜೀವಿಗಳನ್ನು ರಕ್ಷಿಸಲು ಅಂದಿನ ರಾಜ್ಯ ಸರ್ಕಾರ ತೆಗೆದುಕೊಂಡ ಪ್ರಯತ್ನಗಳ ಬಗ್ಗೆ ಹೇಳಿದ್ದಾರೆ. ಹಾಗೂ ಕಳೆದ ಹಲವು ವರ್ಷಗಳಲ್ಲಿನ ಸತತ ಪ್ರಯತ್ನಗಳು ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಸ್ಥಿರವಾಗಿ ಏರುತ್ತಿರುವುದನ್ನು ಖಚಿತಪಡಿಸಿವೆ ಎಂದು ಅವರು ಹೇಳಿದ್ದಾರು.
ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಗಿರ್ ಸಿಂಹ ಸಫಾರಿಗೆ ಬಳಿಕ, ಪ್ರಧಾನಿ ಮೋದಿ ರಿಲಯನ್ಸ್ ಜಾಮ್‌ನಗರ ಸಂಸ್ಕರಣಾಗಾರ ಸಂಕೀರ್ಣದಲ್ಲಿರುವ ಪ್ರಾಣಿಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತರಾಗೆ ಭೇಟಿ ನೀಡಿದರು. ವಂತರಾ ಬಂಧಿತ ಆನೆಗಳು ಮತ್ತು ವನ್ಯಜೀವಿಗಳ ಕಲ್ಯಾಣಕ್ಕೆ ಸಮರ್ಪಿತವಾಗಿದೆ, ನಿಂದನೆ ಮತ್ತು ಶೋಷಣೆಯಿಂದ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಅಭಯಾರಣ್ಯ, ಪುನರ್ವಸತಿ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post