ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ರೈತಾಪಿ ವರ್ಗಕ್ಕೆ ಬಿಗ್ ಗುಡ್ ನ್ಯೂಸ್ ನೀಡಿರುವ ಪ್ರಧಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಕೇಂದ್ರ ಸರ್ಕಾರ, ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಇನ್ನು ಮುಂದೆ ಜಾನುವಾರುಗಳಿಗೆ ಕೊಡುವ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ರೈತರಿಗೆ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
ಈವರೆಗೂ ಜನಸಾಮಾನ್ಯರಿಗೆ ಅಗತ್ಯವಾಗಿರುವ ಗುಣಮಟ್ಟದ ಔಷಧಿಗಳನ್ನು ಕಡಿಮೆ ದರದಲ್ಲಿ ನೀಡುತ್ತಿದ್ದು, ಇದೇ ಮಾದರಿಯಲ್ಲಿ ರೈತರ ಜಾನುವಾರುಗಳಿಗೆ ಅಗತ್ಯವಾದ ಔಷಧಿಗಳನ್ನು ಜನೆರಿಕ್ ಮಾದರಿಯಲ್ಲಿ ಬಿಡುಗಡೆಗೆ ಮುಂದಾಗಿದೆ.
Also read: ರಾಜ್ಯದಲ್ಲಿ ಪಾಕಿಗಳು ಸೇರಿ 137 ಅಕ್ರಮ ವಲಸಿಗರ ಬಂಧನ | ಶಿವಮೊಗ್ಗದಲ್ಲೂ ಪತ್ತೆಯಾಗಿದ್ದು ಎಷ್ಟು ಮಂದಿ?

ಸಾಂಪ್ರದಾಯಿಕ ಪಶುವೈದ್ಯಕೀಯ ಔಷಧಿಗಳನ್ನು ದಾಖಲಿಸುವುದೂ ಈ ಯೋಜನೆಗೆ ಭಾಗವಾಗಿದೆ ಎಂದು ವರದಿಯಾಗಿದೆ.

ಈ ಯೋಜನೆಗೆ ಬಜೆಟ್’ನಲ್ಲಿ 3,880 ಕೋಟಿ ರೂ. ಮೀಸಲಿಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 2024-25 ಮತ್ತು 2025-26 ಅವಧಿಗೆ ಅನ್ವಯಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post