ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದ್ದ ಎರಡು ಕ್ಷೇತ್ರಗಳಲ್ಲಿ ರಾಯ್ ಬರೇಲಿಯನ್ನು ರಾಹುಲ್ ಗಾಂಧಿ #Rahul Gandhi ಉಳಿಸಿಕೊಳ್ಳಲಿದ್ದು, ಉಪ ಚುನಾವಣೆ ನಡೆಯಲಿರುವ ವಯನಾಡ್’ನಿಂದ ಪ್ರಿಯಾಂಕ ವಾದ್ರ ಸ್ಪರ್ಧೆ ಮಾಡಲಿದ್ದಾರೆ.
ಈ ಕುರಿತಂತೆ ಘೋಷಣೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, #Mallikarjuna Kharge ವಯನಾಡ್ ಕ್ಷೇತ್ರವನ್ನು ರಾಹುಲ್ ತೆರವು ಮಾಡಿ, ರಾಯ್ ಬರೇಲಿಯನ್ನು #Raibareli ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ಇನ್ನು ಪ್ರಮುಖವಾಗಿ, ತೆರವಾಗಲಿರುವ ವಯನಾಡ್ ಕ್ಷೇತ್ರದ ಉಪಚುನಾವಣೆಗೆ ರಾಹುಲ್ ಸಹೋದರಿ ಪ್ರಿಯಾಂಕಾ ವಾದ್ರಾ #Priyanka Wadra ಮೊದಲ ಬಾರಿಗೆ ಸ್ಪರ್ಧೆ ಮಾಡಲಿದ್ದಾರೆ ಎಂದರು.
Also read: ಶಿವಮೊಗ್ಗ | ಕುಡಿದ ಮತ್ತಿನಲ್ಲಿ ವ್ಯಕ್ತಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಕಲ್ಲು ಎತ್ತು ಹಾಕಿ ಭೀಕರ ಹತ್ಯೆ
ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಜೂನ್ 4 ರಂದು ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾದ 14 ದಿನಗಳಲ್ಲಿ ಒಂದು ಸ್ಥಾನವನ್ನು ತೆರವು ಮಾಡಬೇಕಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಅವರು ಇಂದು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ.
ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ವಯನಾಡ್ ಕ್ಷೇತ್ರವನ್ನು ತೆರವು ಮಾಡಿದರೂ ಸಹ ಆ ಕ್ಷೇತ್ರದ ಜನರಿಗೆ ತಮ್ಮ ಮನೆಯ ಬಾಗಿಲು ಸದಾಕಾಲ ತೆರೆದಿರುತ್ತದೆ. ಅಲ್ಲದೇ, ವಯನಾಡ್ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದು, ಅವರ ಮೂಲಕ ಇಬ್ಬರೂ ಅಲ್ಲಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post