ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಖೋಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ)ದ #KhoKhoFederation of India ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ #Sudhanshu Mittal ಪುನರ್ ಆಯ್ಕೆಯಾಗಿದ್ದು, ಉಪ್ಕಾರ್ ಸಿಂಗ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿರುವ ಕೆಕೆಎಫ್’ಐ ಮುಖ್ಯ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಚುನಾವಣೆಯ ಬಳಿಕ ಹೊಸ ಆಡಳಿತ ಮಂಡಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ನ್ಯಾಯಾಧೀಶ (ನಿವೃತ್ತ) ಡಾ. ಕಾಮಿನಿಲಾವ್ ಅವರು ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಗೋವಿಂದ್ ವರ್ಮಾ ಹೊಸ ಆಡಳಿತದ ಖಜಾಂಚಿಯಾಗಿ ಆಯ್ಕೆಯಾದರು.
ಈ ಬಗ್ಗೆ ಮಾತನಾಡಿದ ಸುಧಾಂಶುಮಿತ್ತಲ್ ಭಾರತ ಖೋಖೋ ಫೆಡರೇಶನ್ ನೇತೃತ್ವ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಈ ಕ್ರೀಡೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ತರಲು ನಿರಂತರವಾಗಿ ಪರಿಶ್ರಮ ಮಾಡಿದ್ದೇವೆ. ಈ ಪುನಃ ಆಯ್ಕೆಯು ಖೋಖೋ ಕ್ರೀಡೆಯ ಜಾಗತಿಕ ಗುರುತಿಗೆ ಮತ್ತು ಸ್ಥಿರವಾದ ಬೆಳವಣಿಗೆಗೆ ನಮ್ಮ ದೃಷ್ಟಿಕೋನವನ್ನು ಇನ್ನಷ್ಟು ವೇಗಗೊಳಿಸಲು ಪ್ರೇರಣೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಹೊಸ ಆಡಳಿತ ಮಂಡಳಿಯಲ್ಲಿ ಎಂಟು ಉಪಾಧ್ಯP್ಷÀರು, ನಾಲ್ಕು ಜಂಟಿ ಕಾರ್ಯದರ್ಶಿಗಳು ಮತ್ತು ಹದಿಮೂರು ಕಾರ್ಯಕಾರಿ ಸದಸ್ಯರನ್ನು ಸಹ ಆಯ್ಕೆ ಮಾಡಲಾಗಿದೆ. ಅಶ್ವಿನಿ, ಮೋನಿಕಾ ಅವರು ಆಟಗಾರರ ಆಯೋಗದ ಪ್ರತಿನಿಧಿಗಳಾಗಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ನೂತನ ಜನರಲ್ ಸೆಕ್ರೆಟರಿ ಉಪ್ಕಾರ್ ಸಿಂಗ್ ಮಾತನಾಡಿ, `ಖೋಖೋ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಕ್ರೀಡೆ. ಇದನ್ನು ಆಧುನಿಕ ಹಾಗೂ ಜಾಗತಿಕ ಕ್ರೀಡೆಯಾಗಿ ರೂಪಾಂತರಗೊಳಿಸುವ ಸಾಧ್ಯತೆ ನಮ್ಮ ಕೈಯಲ್ಲಿ ಇದೆ ಎಂದರು.
ಆಡಳಿತ ಮಂಡಳಿಯ ಸದಸ್ಯರು
ಭವಾರ್ ಸಿಂಗ್ ಲಾರಾ – ರಾಜಸ್ಥಾನ ಖೋಖೋ ಅಸೋಸಿಯೇಷನ್
ಕಲ್ಯಾಣ್ ಚಟರ್ಜೀ – ಪಶ್ಚಿಮ ಬಂಗಾಳ ಖೋಖೋ ಅಸೋಸಿಯೇಷನ್
ಕಮಲಜೀತ್ ಅರೋರಾ – ಛತ್ತೀಸ್’ಘಢ ಅಮೆಚ್ಯುರ್ ಖೋಖೋ ಅಸೋಸಿಯೇಷನ್
ಲೋಕೇಶ್ವರ – ಕರ್ನಾಟಕ ರಾಜ್ಯ ಖೋಖೋ ಅಸೋಸಿಯೇಷನ್
ಎನ್. ಮಧುಸೂಧನ್ ಸಿಂಗ್ – ಮಣಿಪುರ ಅಮೆಚ್ಯುರ್ ಖೋಖೋ ಅಸೋಸಿಯೇಷನ್
ಎಂ. ಸೀತಾರಾಮಿ ರೆಡ್ಡಿ – ಆಂಧ್ರಪ್ರದೇಶ ಖೋಖೋ ಅಸೋಸಿಯೇಷನ್
ಪ್ರದ್ಯುಮ್ನ ಮಿಶ್ರಾ – ಒಡಿಶಾ ಖೋಖೋ ಅಸೋಸಿಯೇಷನ್
ರಾಜೀಬ್ ಪ್ರಕಾಶ್ ಬರುವಾ – ಅಸ್ಸಾಂ ಖೋಖೋ ಅಸೋಸಿಯೇಷನ್
ಜಂಟಿ ಕಾರ್ಯದರ್ಶಿಗಳು:
ನೆಲ್ಸನ್ ಸ್ಯಾಮ್ಯುಯೆಲ್ – ತಮಿಳುನಾಡು ಖೋಖೋ ಅಸೋಸಿಯೇಷನ್
ಎಲ್.ಆರ್. ವರ್ಮಾ- ಹಿಮಾಚಲ ಪ್ರದೇಶ ಖೋಖೋ ಅಸೋಸಿಯೇಷನ್
ಸಂಜಯ್ ಯಾದವ್- ಮಧ್ಯಪ್ರದೇಶ ಹವ್ಯಾಸಿ ಖೋಖೋ ಅಸೋಸಿಯೇಷನ್
ಸುನೀಲ್ ಕೆ.ನಾಯ್ಕ- ಆಲ್ ಗೋವಾ ಖೋ ಖೋ ಅಸೋಸಿಯೇಷನ್
ಕಾರ್ಯಕಾರಿ ಸದಸ್ಯರು:
ಅಮರಿಂದರ್ ಪಾಲ್ ಸಿಂಗ್- ಜಮ್ಮು ಮತ್ತು ಕಾಶ್ಮೀರ ರಾಜ್ಯ ಖೋಖೋ ಅಸೋಸಿಯೇಷನ್
ಅನುಪ್ ಚಕ್ರವರ್ತಿ- ಸಿಕ್ಕಿಂ ಖೋ ಖೋ ಅಸೋಸಿಯೇಷನ್
ಬಿಜನ್ ಕುರ್ಮಾ ದಾಸ್- ಪಶ್ಚಿಮ ಬಂಗಾಳ ಖೋಖೋ ಅಸೋಸಿಯೇಷನ್
ಗುರ್ಚಂದ್ ಸಿಂಗ್- ಪಂಜಾಬ್ ಖೋಖೋ ಅಸೋಸಿಯೇಷನ್
ಎಂವಿಎಸ್’ಎಸ್ ಪ್ರಸಾದ್- ಆಂಧ್ರಪ್ರದೇಶ ಖೋಖೋ ಅಸೋಸಿಯೇಷನ್
ನೀರಜ್ ಕುಮಾರ್- ಬಿಹಾರದ ಖೋಖೋ ಅಸೋಸಿಯೇಷನ್
ಎನ್. ಕೃಷ್ಣಮೂರ್ತಿ- ತೆಲಂಗಾಣ ಖೋಖೋ ಅಸೋಸಿಯೇಷನ್
ಪ್ರಮೋದ್ ಕುಮಾರ್ ಪಾಂಡೆ- ಖೋಖೋ ಅಸೋಸಿಯೇಷನ್ ಆಫ್ ಡಿಎನ್’ಎಚ್ ಮತ್ತು ಡಿಡಿ
ಪುಟೊ ಬುಯಿ- ಅರುಣಾಚಲ ಪ್ರದೇಶದ ಖೋ ಖೋ ಅಸೋಸಿಯೇಷನ್
ರಜತ್ ಶರ್ಮಾ- ಉತ್ತರಾಂಚಲ ಕ್ಷೇತ್ರ ಖೋಖೋ ಅಸೋಸಿಯೇಷನ್
ಸಂಜೀವ್ ಶರ್ಮಾ- ಚಂಡೀಗಢ ಖೋಖೋ ಅಸೋಸಿಯೇಷನ್
ಸಂತೋಷ್ ಪ್ರಸಾದ್- ಜಾರ್ಖಂಡ್ ರಾಜ್ಯ ಖೋಖೋ ಅಸೋಸಿಯೇಷನ್
ಸೂರ್ಯ ಪ್ರಕಾಶ್ ಖತ್ರಿ- ಖೋಖೋ ಅಸೋಸಿಯೇಷನ್ ಆಫ್ ದೆಹಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post