ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಟಿ20 ವಿಶ್ವಕಪ್ #T20 World Cup ವಿಜೇತ ಭಾರತೀಯ ಕ್ರಿಕೆಟ್ ತಂಡದ #Indian Cricket Team ಸಾಧಕರು ಇಂದು ನವದೆಹಲಿಗೆ ಬಂದಿಳಿದಿದ್ದು, ಅದ್ದೂರಿ ಸ್ವಾಗತ ಕೋರಲಾಗಿದೆ.
ಬಾರ್ಬಡೋಸ್’ನಲ್ಲಿ ಪ್ರಶಸ್ತಿ ಗೆದ್ದು ಐದು ದಿನಗಳಾದರೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ತಡವಾಗಿ ಇಂದು ಚಾರ್ಟರ್ ವಿಮಾನದಲ್ಲಿ ದೆಹಲಿಗೆ ಬಂದಿಳಿದರು.
ಇಂದು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ #Indira Gandhi International Airport ನೂರಾರು ಅಭಿಮಾನಿಗಳು, ತಮ್ಮ ನೆಚ್ಚಿನ ಆಟಗಾರರನ್ನು ಅಭಿನಂದಿಸುವ ಫಲಕಗಳನ್ನು ಹಿಡಿದು ರಾಷ್ಟçಧ್ವಜವನ್ನು ಬೀಸುತ್ತಾ, ಜಯಶಾಲಿ ಆಟಗಾರರನ್ನು ಸ್ವಾಗತಿಸಲು ಕಾದು ನಿಂತಿದ್ದರು. ವಿಮಾನ ನಿಲ್ದಾಣದ ಹೊರಗೆ ಸರತಿ ಸಾಲಿನಲ್ಲಿ ನಿಲ್ಲಲು ಮಳೆ ಅಡ್ಡಿಪಡಿಸಿತು.
Also read: ಫುಟ್ಬಾಲ್ ಲೀಗ್ ಪಂದ್ಯಾವಳಿ: ದಯಾ ಫ್ರೆಂಡ್ಸ್ ಗೆ ರೋಚಕ ಗೆಲುವು
ಟೀಂ ಇಂಡಿಯಾ ಆಟಗಾರರನ್ನು ಐಟಿಸಿ ಮೌರ್ಯ ಹೊಟೇಲ್’ಗೆ ಬಿಗಿ ಭದ್ರತೆಯ ಝೀರೋ ಟ್ರಾಫಿಕ್’ನೊಂದಿಗೆ ಕರೆತರಲಾಯಿತು.
ಪ್ರಧಾನಿ ನಿವಾಸಕ್ಕೆ ಭೇಟಿ
ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರ ಆಹ್ವಾನದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಅವರ ನಿವಾಸಕ್ಕೆ ತೆರಳಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮಾ ನೇತೃತ್ವದ ತಂಡವು ತನ್ನ ಎರಡನೇ ಟಿ20 ವಿಶ್ವ ಪ್ರಶಸ್ತಿಯನ್ನು ದೇಶಕ್ಕೆ ಗೆದ್ದುಕೊಂಡಿತು, ಈ ಮೂಲಕ ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆ ಕಳೆದ ಶನಿವಾರ ಅಂತ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















