ಕಲ್ಪ ಮೀಡಿಯಾ ಹೌಸ್ | ಕುಂದಾಪುರ |
ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ತಾಲೂಕಿನ ಶ್ರೀಕ್ಷೇತ್ರ ಕಮಲಶಿಲೆ ದೇವಾಲಯದ #Shri Kshethra Kamalashile Temple ಒಳಗೆ ಕುಬ್ಜಾ ನದಿ ನೀರು ನುಗ್ಗಿದ್ದು, ಗರ್ಭಗುಡಿ ಪ್ರವೇಶಿಸಿದೆ.
ಹೌದು… ಘಟ್ಟ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ ಪಕ್ಕ ಹರಿಯುತ್ತಿರುವ ವಾರಾಹಿ ಉಪನದಿ ಕುಬ್ಜೆಯು ನಿನ್ನೆ ರಾತ್ರಿ 1.30ರ ಹೊತ್ತಿಗೆ ಉಕ್ಕಿ ಹರಿದು ದೇವಾಲಯ ಗರ್ಭಗುಡಿ ಪ್ರವೇಶಿಸಿದೆ.
Also read: ದೆಹಲಿಗೆ ಟೀಂ ಇಂಡಿಯಾ ಆಟಗಾರರು | ಅದ್ದೂರಿ ಸ್ವಾಗತ | ಪ್ರಧಾನಿ ನಿವಾಸಕ್ಕೆ ಭೇಟಿ | ಸಂಜೆ ಸಂಭ್ರಮಾಚರಣೆ
ಪ್ರಮುಖವಾಗಿ ಉದ್ಭವ ಬ್ರಾಹ್ಮೀ ದುರ್ಗಾಪರಮೇಶ್ವರಿ ಲಿಂಗವನ್ನು ಸಂಪೂರ್ಣ ಮುಳುಗಿಸಿದ ವಿಶೇಷ ಘಟನೆಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ದೇವಾಲಯ ಆರ್ಚಕರು ಶ್ರೀ ದೇವಿಗೆ ವಿಶೇಷ ಮಂಗಳಾರತಿ ನೇರವೇರಿಸಿದರು.
ರಾತ್ರಿಯೇ ಸುದ್ದಿ ತಿಳಿದ ಸುತ್ತ ಮುತ್ತಲಿನ ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸಿ ದೇವಾಲಯ ಆವರಣದಲ್ಲಿ ಪವಿತ್ರ ಸ್ನಾನ ಮಾಡಿ ಪುಳಕಿತರಾದರು.
ಕೆಲವೊಂದು ವರ್ಷಗಳಲ್ಲಿ ಮಾತ್ರ ಸಂಭವಿಸುವ ಈ ವಿಶೇಷ ಘಟನೆ ಪ್ರಕೃತಿ ಸಮೃದ್ಧಿಯ ಸಂಕೇತವೂ ಆಗಿದೆ ಎನ್ನಬಹುದು.
(ಮಾಹಿತಿ: ತ್ಯಾಗರಾಜ ಮಿತ್ಯಾಂತ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post