ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಎಲ್ಲ ವಸ್ತುಗಳ ದರ ಏರಿಕೆ ಮಾಡಿದ್ದು, ಇನ್ನು ಉಸಿರಾಡುವ ಗಾಳಿಗೆ ಮಾತ್ರ ತೆರಿಗೆ ಹಾಕುವುದು ಬಾಕಿಯಿದೆ ಎಂದು ಬಿಜೆಪಿ ಎಂಎಲ್’ಸಿ ಸಿ.ಟಿ. ರವಿ #C T Ravi ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮನಸೋಯಿಚ್ಛೆ ದರ ಏರಿಕೆ ಮಾಡಲಾಗುತ್ತಿದೆ. ಗ್ಯಾರೆಂಟಿಯಿಂದಾಗಿ ರಾಜ್ಯದ ಖಜಾನೆ ದಿವಾಳಿ ಆಗಿದೆ. ಸರ್ಕಾರದ ಆಸ್ತಿ ಮಾರಿ ಎಂದು ಸಲಹೆ ಕೊಡೋಕೆ ವಿದೇಶದಿಂದ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
Also read: ಕಿಡ್ನಾಪ್ ಮಾಡಿ ಮಕ್ಕಳ ಮಾರಾಟ ಜಾಲದ ಹೆಡೆಮುರಿ ಕಟ್ಟಿದ ಪೊಲೀಸರು | 9 ಖದೀಮರ ಬಂಧನ
11 ತಿಂಗಳಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕೃತವಾಗಿಯೇ ರೈತರ ಆತ್ಮಹತ್ಯೆ ಸಂಖ್ಯೆ ಈವರೆಗೆ 750 ದಾಟಿದೆ. ಬಿತ್ತನೆ ಬೀಜದ ದರ ಸಹ ಏರಿಕೆ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರ ಮಾತ್ರ ಸುಮ್ಮನೆ ಕುಳಿತಿದೆ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post