No Result
View All Result
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?
English Articles

Heritage Weighing Machine Restored, Unveiled at Mysuru Railway Museum

by ಕಲ್ಪ ನ್ಯೂಸ್
June 7, 2026
0

Kalpa Media House  |  Mysuru  | A rare and historically significant railway artifact—a 2000 kg capacity mechanical platform weighing scale...

Read moreDetails
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

Political Turmoil in Tamil Nadu: BJP Faces Wave of Resignations

June 6, 2026
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

SpiceJet Flights to Shivamogga Suspended After IndiGo Exit | What’s the Reason?

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
  • Advertise With Us
  • Grievances
  • About Us
  • Contact Us
Sunday, June 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಜಕೀಯ

ಕಾಂಗ್ರೆಸ್’ನವರು ಅಲಿಬಾಬಾ ಮತ್ತು 40 ಕಳ್ಳರು | ಆರ್. ಅಶೋಕ್ ಹೀಗೆ ಹೇಳಿದ್ದೇಕೆ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 27, 2024
in ರಾಜಕೀಯ
0
ಶ್ರೀರಾಮ ಮಂದಿರ ಯಾವ ಪಕ್ಷಕ್ಕೂ ಸೇರಿಲ್ಲ, ಶತಕೋಟಿ ಭಾರತೀಯರಿಗೆ ಸೇರಿದ್ದು: ಆರ್. ಅಶೋಕ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಕೇಂದ್ರ ಸರ್ಕಾರದೊಂದಿಗೆ ಯಾವಾಗಲೂ ಸಂಘರ್ಷ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ #Siddharamaiah ದೆಹಲಿಯಲ್ಲಿ ಸಂಸದರೊಂದಿಗೆ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ #RAshok ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದರೊಂದಿಗೆ ಕಾಟಾಚಾರದ ಸಭೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ದಿನ ಟೀಕಿಸಿ ಈಗ ಸಭೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವಾಗಲೂ ಸೌಹಾರ್ದತೆ ಇರಬೇಕು. ಅಧಿಕಾರ ಇಂದು ಬರುತ್ತದೆ, ಮುಂದೆ ಹೋಗುತ್ತದೆ. ಹೀಗೆ ಸಂಘರ್ಷ ಮಾಡಿಕೊಳ್ಳಲು ಇದು ಭಾರತ-ಪಾಕಿಸ್ತಾನ ಅಲ್ಲ. ಕರ್ನಾಟಕದಲ್ಲಿ #Karnataka ಯಾವುದೇ ಪಕ್ಷ ದೀರ್ಘವಾಗಿ ಆಡಳಿತ ನಡೆಸಿಲ್ಲ. ಇದು ಬದಲಾಗುತ್ತಲೇ ಇರುತ್ತದೆ. ಕೇಂದ್ರ ಸರ್ಕಾರ ನೀಡಿರುವ ಹಣವನ್ನೇ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಜನರು ಬೆಲೆ ಏರಿಕೆಗಳಿಗೆ ತಯಾರಾಗಿರಬೇಕು. ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿಯೇ ಒಬ್ಬ ಸಚಿವರನ್ನು ಬೀಳಿಸಿದ್ದೇವೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬೀಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೆಟ್ರೋಲ್‌ #Petrol ದರ ಏರಿಕೆ, ಹಾಲಿನ ದರ ಏರಿಕೆ, ಸ್ಟಾಂಪ್‌ ಡ್ಯೂಟಿ, ಹೀಗೆ ಎಲ್ಲ ದರ ಏರಿಕೆಗೂ ಕಾಂಗ್ರೆಸ್‌ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಡವರು ಕುಡಿಯುವ ಮದ್ಯದ ದರ ಏರಿಸಿ, ಶ್ರೀಮಂತರ ಮದ್ಯಗಳ ದರ ಇಳಿಕೆ ಮಾಡಿದ್ದಾರೆ. ಇದೇ ಸರ್ಕಾರ ಇನ್ನೂ ಅಧಿಕಾರದಲ್ಲಿ ಇದ್ದರೆ ಕರ್ನಾಟಕದ ಹಣ ಕೊಳ್ಳೆ ಹೊಡೆದು ದೆಹಲಿಗೆ ತೆಗೆದುಕೊಂಡು ಹೋಗುತ್ತದೆ. ಇವರೆಲ್ಲರೂ ಆಲಿಬಾಬ ಮತ್ತು ನಲ್ವತ್ತು ಕಳ್ಳರು ಎಂದರು.

ಈಗ ಹಾಲು ದರ ಏರಿಕೆಯಿಂದ ಹಾಲಾಹಲ ಆಗಿದೆ. ದೇಶಕ್ಕೆ ಅರ್ಥಶಾಸ್ತ್ರದ #Economics ಪಾಠ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಮಿಲಿ ಲೀಟರ್‌ ಹಾಲು ಕಡಿಮೆ ನೀಡಿ ಎರಡು ರೂಪಾಯಿ ಕಡಿಮೆ ಮಾಡಲಿ. ಹಾಲು ಜಾಸ್ತಿ ಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಯಾರೂ ಅರ್ಜಿ ಕೊಟ್ಟಿಲ್ಲ. ಮಳೆಗಾಲ ಬಂದಾಗ ಮೇವು ಹೆಚ್ಚಾಗಿ ಹಾಲು ಹೆಚ್ಚಳವಾಗುವುದು ಸಹಜ. ಅದನ್ನು ಪುಡಿ ಮಾಡುವುದು, ಅಂಗನವಾಡಿಗೆ ಕೊಡುವುದು, ರಫ್ತು ಮಾಡುವುದು ಮೊದಲಾದ ಕ್ರಮಗಳನ್ನು ಸರ್ಕಾರ ಅನುಸರಿಸಬೇಕಿತ್ತು. ಮುಖ್ಯಮಂತ್ರಿಗೆ ಸಹಾಯ ಮಾಡುವ ಬುದ್ಧಿ ಇಲ್ಲ, ಆದರೆ ದುಡ್ಡು ಹೊಡೆಯುವ ಬುದ್ಧಿ ಇದೆ. ಜನರು ಸರ್ಕಾರಕ್ಕೆ ಕಪಾಳಕ್ಕೆ ಬಾರಿಸಬೇಕಿದೆ. 15 ಬಜೆಟ್‌ ಮಂಡಿಸಿದ ಸಿದ್ದರಾಮಯ್ಯನವರ ಅರ್ಥಶಾಸ್ತ್ರ ಇದೇ ಎಂದು ಟೀಕಿಸಿದರು.
ಕೆಂಪೇಗೌಡರು ಒಬ್ಬರ ಸ್ವತ್ತಲ್ಲ
ನಾಡಪ್ರಭು ಕೆಂಪೇಗೌಡರು #Kempegowda ಯಾರೋ ಒಬ್ಬರ ಸ್ವತ್ತಲ್ಲ. ಅವರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಕಾಂಗ್ರೆಸ್‌ ಕೆಂಪೇಗೌಡರ ಸಮುದಾಯವನ್ನೇ ಒಂದಾಗಿರಲು ಬಿಡುತ್ತಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರು. ಕೆಂಪೇಗೌಡ ಜಯಂತಿಗೆ ಅವರನ್ನು ಗೌರವದಿಂದ ಆಹ್ವಾನಿಸಬೇಕಿತ್ತು. ಈ ಜಯಂತಿ ರಾಜಕೀಯಕ್ಕೆ ವೇದಿಕೆಯಾಗಬಾರದು. ಇದು ಕಾಂಗ್ರೆಸ್‌ ಸರ್ಕಾರದ ದ್ವೇಷದ ರಾಜಕಾರಣವಾಗಿದೆ. ಈ ಜಯಂತಿ ಆಚರಣೆಯನ್ನು ಜನರ ದುಡ್ಡಿನಿಂದ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಸಮುದಾಯದ ಎಲ್ಲ ಹಿರಿಯರನ್ನು ಆಹ್ವಾನಿಸಬೇಕು ಎಂದರು.
ಕೆಂಪೇಗೌಡರನ್ನು ಸ್ಮರಿಸುವ ಕಾರ್ಯ
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ ಮಹಾನ್ ನಾಯಕರು. ಕೆರೆ, ಪೇಟೆಗಳನ್ನು ನಿರ್ಮಿಸಿ ಅಭಿವೃದ್ಧಿಯಿಂದ ಜನರನ್ನು ಗೆದ್ದಿದ್ದರು‌. ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ನಿರ್ಮಿಸಲಾಯಿತು. ವಿಧಾನಸೌಧದ ಮುಂಭಾಗ ಈವರೆಗೆ ಕೆಂಪೇಗೌಡರ ಪ್ರತಿಮೆ ಇರಲಿಲ್ಲ. ನಾನು ಸಚಿವನಾಗಿದ್ದಾಗ, ಅಂದಿನ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಅಶ್ವಾರೋಹಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದೆ. ಪೂರ್ವಜರನ್ನು ನೆನಪಿಸುವ ಕೆಲಸ ಸದಾ ನಡೆಯಬೇಕು ಎಂದರು.

ಶಾಲಾ ಪಠ್ಯಗಳಲ್ಲಿ ಹೆಚ್ಚಾಗಿ ಕೆಂಪೇಗೌಡರ ಚರಿತ್ರೆ ದಾಖಲಾದರೆ ಮಕ್ಕಳಿಗೆ ಹೆಚ್ಚು ಮಾಹಿತಿ ದೊರೆಯುತ್ತದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BENGALURUKannada News WebsiteKarnatakaLatest News KannadaR AshokSiddharamaiahಆರ್. ಅಶೋಕ್ಕರ್ನಾಟಕಕೆಂಪೇಗೌಡ ಜಯಂತಿಕೇಂದ್ರ ಸರ್ಕಾರಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯ
Share197Tweet123Send
Previous Post

ಕಿಡ್ನಾಪ್ ಮಾಡಿ ಮಕ್ಕಳ ಮಾರಾಟ ಜಾಲದ ಹೆಡೆಮುರಿ ಕಟ್ಟಿದ ಪೊಲೀಸರು | 9 ಖದೀಮರ ಬಂಧನ

Next Post

ರಾಜ್ಯ ಸರ್ಕಾರ ಇದಕ್ಕೊಂದು ಟ್ಯಾಕ್ಸ್ ಹಾಕೋದು ಬಾಕಿಯಿದೆ | ಸಿ.ಟಿ. ರವಿ ಹೇಳಿದ್ದೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಾವು ಬೀದಿಗೆ ಇಳಿದರೆ ನಿಮ್ಮ ಗತಿ ಏನಾಗುತ್ತದೆ ಚಿಂತಿಸಿ: ಖಾದರ್’ಗೆ ಸಚಿವ ರವಿ ಎಚ್ಚರಿಕೆ

ರಾಜ್ಯ ಸರ್ಕಾರ ಇದಕ್ಕೊಂದು ಟ್ಯಾಕ್ಸ್ ಹಾಕೋದು ಬಾಕಿಯಿದೆ | ಸಿ.ಟಿ. ರವಿ ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

Heritage Weighing Machine Restored, Unveiled at Mysuru Railway Museum

June 7, 2026
ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

June 7, 2026
ಕ್ಯಾನ್ಸರ್ ಅಂತ್ಯವಲ್ಲ, ಹೊಸ ಬದುಕಿನ ಆರಂಭ | ಸರ್ವೈವರ್ ಡೇಯಲ್ಲಿ ಬದುಕು ಗೆದ್ದವರ ಸ್ಪೂರ್ತಿದಾಯಕ ಸಂದೇಶ

ಕ್ಯಾನ್ಸರ್ ಅಂತ್ಯವಲ್ಲ, ಹೊಸ ಬದುಕಿನ ಆರಂಭ | ಸರ್ವೈವರ್ ಡೇಯಲ್ಲಿ ಬದುಕು ಗೆದ್ದವರ ಸ್ಪೂರ್ತಿದಾಯಕ ಸಂದೇಶ

June 7, 2026
ಮೈಸೂರು ರೈಲ್ವೆ ವಿಭಾಗ | ಶಿವಮೊಗ್ಗ, ಮೈಸೂರು, ಸಕಲೇಶಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು ರೈಲ್ವೆ ವಿಭಾಗ | ಶಿವಮೊಗ್ಗ, ಮೈಸೂರು, ಸಕಲೇಶಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

June 7, 2026
ಶಿಕಾರಿಪುರ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ | ಬಿ.ವೈ. ಉಮಾದೇವಿ

ಶಿಕಾರಿಪುರ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ | ಬಿ.ವೈ. ಉಮಾದೇವಿ

June 7, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL