ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡೀ ದೇಶದ ತುಂಬ ವಕ್ಪ್ ಆಸ್ತಿಯನ್ನು #Waqf Property ಕಬಳಿಕೆ ಮಾಡಿದವರೇ ಕಾಂಗ್ರೆಸ್‌ನವರು, ಅವರು ಮಾಡಿರುವ ಕಬಳಿಕೆಯನ್ನು ಮುಚ್ಚಿ ಹಾಕಲು ವಕ್ಸ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಆರೋಪಿಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಸ್ ಬಿಲ್ 1950ರ ದಶಕದಲ್ಲಿ ಬಂದಿದ್ದು. 1990 ಹಾಗೂ 2013 ರಲ್ಲಿ ತಿದ್ದುಪಡಿಯಾಗಿದೆ. ಈಗ ತಿದ್ದುಪಡಿ ಮಾಡುತ್ತಿರುವುದೇನು ಹೊಸದೇನಲ್ಲ. 2013 ಕ್ಕಿಂತ ಮುಂಚೆ ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಸಮಿತಿ ಕೆಲವು ಶೀಫಾರಸು ಮಾಡಿತ್ತು. ಅವುಗಳಲ್ಲಿ ಆಗಿನ ಯುಪಿಎ ಸರ್ಕಾರ ಕೆಲವೇ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ಕೆಲವು ಅಂಶಗಳನ್ನು ಹಾಗೇ ಬಿಟ್ಟಿತ್ತು. ಮುಖ್ಯವಾಗಿ ದೇಶದ ಕಾನೂನು ಬಹಳ ದೊಡ್ಡದು, ಸಂವಿಧಾನ ದೊಡ್ಡದು. 1990 ಹಾಗೂ 2013ರ ಕಾಯ್ದೆಯಲ್ಲಿ ಎಲ್ಲ ಕಾನೂನಿಗಿಂತ ವಕ್ಪ್ ದೊಡ್ಡದು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಕೂಡ ಇದರಲ್ಲಿ ಮಧ್ಯಸ್ಥಿಕೆ ವಹಿಸದಂತೆ ಮಾಡಲಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
Also read: ಈ ಆಸ್ತಿ ಇನ್ಮುಂದೆ ವಕ್ಫ್ ಆಸ್ತಿ ಆಗಿರಲ್ಲ | ಏನಿದು ತಿದ್ದುಪಡಿಯಲ್ಲಿನ ಮಹತ್ವದ ಅಂಶ?
ಇನ್ನೊಂದು ಇದರಲ್ಲಿ ಸಾಕಷ್ಟು ವ್ಯಾಜ್ಯಗಳಿವೆ. ಮುಸಲ್ಮಾನರ ಆಸ್ತಿಯೇ ವಕ್ಪ್ ಗೆ ಹೋಗಿದೆ. ವಕ್ಸ್ ಆಸ್ತಿಯೇ ಕಾಂಗ್ರೆಸ್ ನಾಯಕರ ಕೈಗೆ ಹೋಗಿದೆ. ಕರ್ನಾಟಕದಲ್ಲಿ ವಕ್ಪ್ ಆಸ್ತಿ ಕಾಂಗ್ರೆಸ್ ನಾಯಕರ ಕೈಯಲ್ಲಿರುವ ಬಗ್ಗೆ ದೊಡ್ಡ ವರದಿಯೇ ಇದೆ. ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ವಕ್ಪ್ ಆಸ್ತಿ ಎಂದು ಮಾಡಲಾಗಿದೆ. ಸರ್ಕಾರದ ಆಸ್ತಿ ವಕ್ಪ್ ಆಸ್ತಿ ಎನ್ನಲಾಗಿದೆ. ಬೇರೆ ಎಲ್ಲಾ ಸಮುದಾಯಗಳಿಗೆ ಕಂದಾಯ ಕಾಯ್ದೆಯೇ ಸುಪ್ರೀಂ ಆಗಿದೆ. ಆದರೆ, ವಕ್ಪ್ ಗೆ ಮಾತ್ರ ಅನ್ವಯ ಆಗುವುದಿಲ್ಲ. ಕಂದಾಯ ಕಾಯ್ದೆಯೇ ಸುಪ್ರೀಂ ಆಗಬೇಕು. ಅದನ್ನು ಸರಿಪಡಿಸಲು ಜಂಟಿಸದನ ಸಮಿತಿ ಸಾಕಷ್ಟು ಚರ್ಚೆ ಮಾಡಿದೆ. ದೇಶಾದ್ಯಂತ ತಿರುಗಾಡಿ ಅಭಿಪ್ರಾಯ ಪಡೆದಿದೆ. ಮುಸ್ಲಿಂ ಸೇರಿದಂತೆ ಹಲವಾರು ಸಮುದಾಯಗಳು, ಕ್ರಿಶ್ಚಿಯನ್ನರೂ, ಅಜೀರ್ ದರ್ಗಾದವರು ಇದನ್ನು ಸ್ವಾಗತ ಮಾಡಿದ್ದಾರೆ. ಈ ಬಗ್ಗೆ ಚರ್ಚೆಯಾಗಲಿ’ ಎಂದರು.
ಯಾವುದೇ ವ್ಯಾಜ್ಯ ಇಲ್ಲದ ವಕ್ಸ್ ಆಸ್ತಿ ವಕ್ಪ್ ಆಸ್ತಿಯಾಗಿಯೇ ಉಳಿಯಲಿದೆ. ದೇಶದ ಕಾನೂನು ಏನಿದೆ ಅದರ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದೆ. ಸತ್ಯ ಹೇಳಬೇಕೆಂದರೆ ಇಡೀ ದೇಶದ ತುಂಬ ವಕ್ಸ್ ಆಸ್ತಿಯನ್ನು ಕಬಳಿಕೆ ಮಾಡಿದವರೇ ಕಾಂಗ್ರೆಸ್‌ನವರು, ಅವರ ಕಬಳಿಕೆಯನ್ನು ಮುಚ್ಚಿ ಹಾಕಲು ವಕ್ಸ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮುಸ್ಲೀಮ್ ಮಂಡಳಿಯಲ್ಲಿ ಹಿಂದುಗಳನ್ನು ಸದಸ್ಯರನ್ನಾಗಿ ಮಾಡಿರುವ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರಾವಳಿ ಭಾಗದಲ್ಲಿ ಮುಜರಾಯಿ ಇಲಾಖೆಯ ಅನೇಕ ದೇವಸ್ಥಾನಗಳಲ್ಲಿ ಮುಸ್ಲಿಮರೇ ಆಡಳಿತಾಧಿಕಾರಿಗಳಾಗಿದ್ದರು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post