ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ಸಹ ಬಿಜೆಪಿ ನೇತೃತ್ವದ ಕೇಂದ್ರದ ಎನ್’ಡಿಎ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು #Waqf Amendment Bill ಮಂಡಿಸಿದ್ದು, ಹಲವು ಅಂಶಗಳನ್ನು ಉಲ್ಲೇಖಿಸಿದೆ.
ಲೋಕಸಭೆಯಲ್ಲಿಂದು ಸಚಿವ ಕಿರಣ್ ರಿಜಿಜು #Kiran Rijiju ಮಸೂದೆಯನ್ನು ಮಂಡಿಸಿದ್ದು, ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರತಿ ಅಂಶವನ್ನೂ ಸದನಕ್ಕೆ ಓದಿ ಹೇಳಿದ ರಿಜಿಜುಗೆ ಎನ್’ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಕೆಲ ಕಾಲ ಗದ್ದಲ ಎಬ್ಬಿಸಿದವು.
ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳ ಪೈಕಿ ಈ ಮಸೂದೆ ಅಂಗೀಕಾರವಾಗುವ ಮುನ್ನ ಹಾಗೂ ಅಂಗೀಕಾರವಾದ ನಂತರ ವಕ್ಫ್ ಆಸ್ತಿಯೆಂದು ಗುರುತಿಸಿದ ಹಾಗೂ ಘೋಷಿಸಿದ ಸರ್ಕಾರದ ಯಾವುದೇ ಆಸ್ತಿಯನ್ನೂ ಸಹ ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂಬ ಅಂಶ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
Also read: ವಕ್ಫ್ ತಿದ್ದುಪಡಿ ಮಸೂದೆ ಮಂಡನೆ | ಮೋದಿ ಜಿಂದಾಬಾದ್ ಎಂದ ಮುಸ್ಲಿಂ ಮಹಿಳೆಯರು | ವೀಡಿಯೋ ನೋಡಿ
ವಕ್ಫ್ ಹೆಸರಿನಲ್ಲಿರುವ ಸರ್ಕಾರಿ ಆಸ್ತಿಗಳ ಕುರಿತು ತಿದ್ದುಪಡಿಯಲ್ಲಿ ಏನೆಂದು ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
- ಈ ಕಾಯ್ದೆ ಜಾರಿಗೆ ಬರುವ ಮೊದಲು ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.
- ಅಂತಹ ಯಾವುದೇ ಆಸ್ತಿ ಸರ್ಕಾರಿ ಆಸ್ತಿಯೇ ಎಂಬ ಬಗ್ಗೆ ಯಾವುದೇ ಪ್ರಶ್ನೆ ಉದ್ಭವಿಸಿದರೆ, ಅದನ್ನು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಲೆಕ್ಟರ್’ಗೆ ವಹಿಸಲಾಗುತ್ತದೆ, ಅವರು ಸೂಕ್ತವಾದ ವಿಚಾರಣೆಯನ್ನು ನಡೆಸಬೇಕು. ಅಂತಹ ಆಸ್ತಿ ಸರ್ಕಾರಿ ಆಸ್ತಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಿ ರಾಜ್ಯ ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಬೇಕು: ಕಲೆಕ್ಟರ್ ಇದರ ಕುರಿತು ತಮ್ಮ ವರದಿಯನ್ನು ಸಲ್ಲಿಸುವವರೆಗೆ ಅಂತಹ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.
- ಕಲೆಕ್ಟರ್ ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಮತ್ತು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು.
- ರಾಜ್ಯ ಸರ್ಕಾರವು, ಕಲೆಕ್ಟರ್ ವರದಿಯನ್ನು ಸ್ವೀಕರಿಸಿದ ನಂತರ, ದಾಖಲೆಗಳಲ್ಲಿ ಸೂಕ್ತ ತಿದ್ದುಪಡಿ ಮಾಡಲು ಮಂಡಳಿಗೆ ನಿರ್ದೇಶಿಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post