ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನೂತನ ಸರ್ಕಾರ ರಚನೆ ಹಂತದಲ್ಲಿರುವ ಮೋದಿ #Modi ನೇತೃತ್ವದ ಎನ್‌ಡಿಎ #NDA ಮೈತ್ರಿಕೂಟಕ್ಕೆ ಮತ್ತೊಂದು ಶುಭಸುದ್ಧಿ ಸಿಕ್ಕಿದ್ದು, ಸ್ವತಂತ್ರವಾಗಿ ಗೆದ್ದ 10 ಅಭ್ಯರ್ಥಿಗಳು ಬಿಜೆಪಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಸ್ವತಂತ್ರವಾಗಿ ಗೆದ್ದ 10 ಅಭ್ಯರ್ಥಿಗಳ ಜೊತೆಯಲ್ಲಿ ಸ್ವತಃ ಅಮಿತ್ ಶಾ #Amith Shah ಚರ್ಚೆ ನಡೆಸಿದ್ದು, 10 ಮಂದಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಆ 10 ಮಂದಿಯ ಹೆಸರು ಹಾಗೂ ವಿವರ ಬಹಿರಂಗಗೊಂಡಿಲ್ಲ. ಸುಭದ್ರ ಸರ್ಕಾರವನ್ನು ರಚಿಸುವ ಉದ್ದೇಶದಿಂದ ಅಮಿತ್ ಶಾ ಸಂಪೂರ್ಣ ಜವಾಬ್ಧಾರಿ ವಹಿಸಿಕೊಂಡಿದ್ದು, ಬಿಜೆಪಿ ಹೊರತಾಗಿ ಎಲ್ಲಾ ಮೈತ್ರಿ ಪಕ್ಷದ ನಾಯಕರೊಂದಿಗೆ ಸ್ವತಃ ಅವರೇ ಮಾತನಾಡುತ್ತಿದ್ದು, ರಾಷ್ಟ್ರಪತಿಗಳಿಗೆ ಬೆಂಬಲ ಪತ್ರ ಸಲ್ಲಿಸುವವರೆಗೂ ಬಹಳಷ್ಟು ಹೆಸರುಗಳನ್ನು ಗೌಪ್ಯವಾಗಿಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
Also read: ಮೋದಿ ಬೆಂಬಲಕ್ಕೆ ಜೆಡಿಯು, ಟಿಡಿಪಿ | ಎನ್‌ಡಿಎ ಸಭೆಯಲ್ಲಿ ಮೋದಿಗೆ, ನಿತೀಶ್ ಸಲಹೆ ಏನು?
ದೇಶಕ್ಕೆ ಸುಭದ್ರ ಸರ್ಕಾರ ಕೊಡುವ ಉದ್ದೇಶದಿಂದ ಎನ್‌ಡಿಎ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಎನ್‌ಡಿಎ ನಾಯಕರು ಮೋದಿ ನೇತೃದಲ್ಲಿ ರಾಷ್ಟ್ರಪತಿ ಭವನಕ್ಕೆ ತೆರಳಿ ಸರ್ಕಾರ ರಚನೆ ಹಕ್ಕು ಮಂಡನೆ ಹಾಗೂ ಬೆಂಬಲ ಪತ್ರ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post