ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿಮಗೆ ದೇವರಲ್ಲಿ ನಂಬಿಕೆಯಿದ್ದರೆ ಮನೆಯಲ್ಲೇ ಧ್ಯಾನ ಮಾಡಿ. ಕನ್ಯಾಕುಮಾರಿಗೆ ಹೋಗಿದ್ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #Mallikarjuna Kharge ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸದೇ, ಇವೆರಡನ್ನೂ ಪ್ರತ್ಯೇಕವಾಗಿ ಇಡಬೇಕು. ಒಂದು ಧರ್ಮದ ವ್ಯಕ್ತಿ ನಿಮ್ಮೊಂದಿಗೆ ಇರಬಹುದು ಮತ್ತು ಇನ್ನೊಂದು ಧರ್ಮದ ವ್ಯಕ್ತಿ ನಿಮ್ಮ ವಿರುದ್ಧ ಇರಬಹುದು. ಚುನಾವಣೆಯೊಂದಿಗೆ ಧಾರ್ಮಿಕ ಭಾವನೆಗಳನ್ನು ಲಿಂಕ್ ಮಾಡುವುದು ತಪ್ಪು ಎಂದಿದ್ದಾರೆ.
ಪ್ರಧಾನಿಯವರು ಕನ್ಯಾಕುಮಾರಿಗೆ ಹೋಗಿರುವುದನ್ನು ತೀವ್ರವಾಗಿ ಆಕ್ಷೇಪಿಸಿರುವ ಅವರು, ಕನ್ಯಾಕುಮಾರಿಗೆ ತೆರಳಿ ನಾಟಕ ಪ್ರದರ್ಶಿಸಿ ಅದೆಷ್ಟು ಪೋಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ? ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಇಷ್ಟೊಂದು ಹಣ ಏಕೆ ಪೋಲು ಮಾಡುತ್ತೀರಿ? ಅಲ್ಲಿಗೆ ಹೋಗಿ ನೀವು ಮಾಡುತ್ತಿರುವ ಶೋ ಆಫ್ ನಿಂದ ದೇಶಕ್ಕೆ ಹಾನಿ ಉಂಟು ಮಾಡಲಿದೆ ಎಂದು ಟೀಕಿಸಿದ್ದಾರೆ.
Also read: ಪ್ರಜ್ವಲ್ ರೇವಣ್ಣ ಆರು ದಿನ ಎಸ್’ಐಟಿ ಕಸ್ಟಡಿಗೆ | ಇಡೀ ದಿನ ಏನಾಯ್ತು?
ಪ್ರಧಾನಿ ಮೋದಿಯವರು ಏನೇ ಹೇಳಿದರೂ, ಅವರ ನಾಯಕತ್ವವನ್ನು ಬದಲಿಸಲು ದೇಶದ ಜನ ತೀರ್ಮಾನ ಮಾಡಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಷಯವು ಜನರ ಮನಸ್ಸಿನಲ್ಲಿ ಇದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post