ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಯಾವುದೇ ಪತ್ನಿ ತನ್ನ ಪತಿಯನ್ನು ಹಿಜಡಾ(ಟ್ರಾನ್ಸ್’ಜೆಂಡರ್) ಎಂದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್ #Punjab-Hariyana High Court ತೀರ್ಪು ನೀಡಿದೆ.
ಏನಿದು ಪ್ರಕರಣ?
2017ರ ಡಿಸೆಂಬರ್’ನಲ್ಲಿ ಮದುವೆಯಾಗಿದ್ದ ದಂಪತಿ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣ ಇದಾಗಿದೆ. ವಿಚ್ಛೇದನ ಅರ್ಜಿಯಲ್ಲಿ ಪತಿ ತನ್ನ ಹೆಂಡತಿ ರಾತ್ರಿಯಲ್ಲಿ ತಡವಾಗಿ ಏಳುತ್ತಿದ್ದಳು, ತನ್ನ ಅಸ್ವಸ್ಥ ತಾಯಿಗೆ ಅಡುಗೆ ಊಟ ತನ್ನ ರೂಮಿಗೆ ಕಳುಹಿಸಲು ಕೇಳುತ್ತಿದ್ದಳು ಎಂದು ಆರೋಪಿಸಿದ್ದಾರೆ.
Also read: ಚಿಕ್ಕಮಗಳೂರಿಗೆ ಟೂರ್ ಪ್ಲಾನ್ ಮಾಡ್ತಿದಿರಾ? ಹಾಗಾದ್ರೆ ಒಂದು ವಾರ ಮುಂದೂಡಿ | ಜಿಲ್ಲಾಡಳಿತದ ಸೂಚನೆಯೇನು?
ಅಲ್ಲದೇ, ತನ್ನ ಪತ್ನಿ ಅಶ್ಲೀಲ ವೀಡಿಯೋ ಹಾಗೂ ಮೊಬೈಲ್ ಗೇಮ್ ವ್ಯಸನಿಯಾಗಿದ್ದಳು. ಲೈಂಗಿಕತೆ ಅವಧಿಯು ಒಂದು ಬಾರಿಗೆ ಕನಿಷ್ಠ 10-15 ನಿಮಿಷಗಳ ಕಾಲ ನಡೆಯಬೇಕು. ಅದು ರಾತ್ರಿಗೆ ಕನಿಷ್ಠ ಮೂರು ಬಾರಿ ಇರಬೇಕು ಎಂದು ಪತಿ ಆರೋಪಿಸಿದರು.
ಅವಳೊಂದಿಗೆ ಸ್ಪರ್ಧಿಸಲು ದೈಹಿಕವಾಗಿ ಸದೃಢವಾಗಿಲ್ಲ ಎಂದು ಅವಳು ಅವನನ್ನು ನಿಂದಿಸುತ್ತಿದ್ದಳು. ತಾನು ಬೇರೊಬ್ಬರನ್ನು ಮದುವೆಯಾಗುತ್ತೇನೆ ಎಂದು ಬಹಿರಂಗಪಡಿಸಿದ್ದಳು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಂತಹ ಕಾರಣಗಳಿಗಾಗಿ ತನ್ನನ್ನು ಹಿಜ್ಡಾ ಎಂದು ಕರೆಯುತ್ತಾಳೆ. ತನ್ನ ತಾಯಿಯನ್ನೂ ಸಹ ಜರಿಯುತ್ತಾಳೆ. ಪತ್ನಿಯ ಕೃತ್ಯಗಳು ಮತ್ತು ನಡವಳಿಕೆಯು ಕ್ರೌರ್ಯಕ್ಕೆ ಸಮನಾಗಿರುತ್ತದೆ. ಮೊದಲನೆಯದಾಗಿ, ಪ್ರತಿವಾದಿ ಪತಿ ಹಿಜ್ಡಾ ಎಂದು ಕರೆಯುವುದು ಮತ್ತು ತನ್ನ ಅತ್ತೆಗೆ ಹಿಜ್ಡಾಗೆ ಜನ್ಮ ನೀಡಿದ್ದೀರಾ ಎಂದು ಹೇಳುವುದು ಕ್ರೌರ್ಯದ ಕೃತ್ಯವಾಗಿದೆ ಎಂದು ಪೀಠ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















