ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಿಕ್ಕಮಗಳೂರು, #Chikkamagaluru ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕಮಗಳೂರಿನಿಂದ ತಿರುಪತಿಗೆ #Tirupati ನೇರ ನೂತನ ರೈಲು ಸಂಚಾರ ಆರಂಭಗೊಂಡಿದೆ.
ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ಮಲೆನಾಡು, ತುಮಕೂರು ಹಾಗೂ ಬೆಂಗಳೂರು #Bengaluru ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ನೂತನ ರೈಲಿನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯಾವತ್ತು ಸಂಚರಿಸಲಿದೆ?
ತಿರುಪತಿ-ಚಿಕ್ಕಮಗಳೂರು (ರೈಲು ಸಂಖ್ಯೆ 17423) : ಈ ರೈಲು ಪ್ರತಿ ಗುರುವಾರ ರಾತ್ರಿ 09.00 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು ಮರುದಿನ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಚಿಕ್ಕಮಗಳೂರು-ತಿರುಪತಿ (ರೈಲು ಸಂಖ್ಯೆ 17424) : ಈ ರೈಲು ಪ್ರತಿ ಶುಕ್ರವಾರ ಸಂಜೆ 05:30 ಚಿಕ್ಕಮಗಳೂರಿನಿಂದ ಹೊರಡಲಿದ್ದು ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್ ಫೀಲ್ಡ್, ಕೆಆರ್ ಪುರಂ, ಎಸ್‌ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಖರಾಯಪಟ್ಟಣ.
ಈ ರೈಲು ಮಲೆನಾಡು ಭಾಗದ ಜಿಲ್ಲೆಗಳು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಜನರಿಗೆ ತಿರುಪತಿಗೆ ತೆರಳಲು ಅನುಕೂಲವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post