ನವದೆಹಲಿ: ಪಿಒಕೆಯಲ್ಲಿ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿ ತರಬೇತಿ ಪಡೆದ ಉಗ್ರರನ್ನು ಮುಂದಿಟ್ಟುಕೊಂಡು ದೆಹಲಿ, ಮುಂಬೈ ಹಾಗೂ ಲಕ್ನೋಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಈ ಕುರಿತಂತೆ ಕೇಂದ್ರ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪಾಕಿಸ್ಥಾನದ ಐಎಸ್‌ಐ ಜೆಇಎಂಗೆ ಸಹಾಯ ಮಾಡುತ್ತಿದೆ. ಉಗ್ರರಿಗೆ ತರಬೇತಿ ನೀಡುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದು ಸೇರಿದಂತೆ ಹಲವು ರೀತಿಯ ಸಹಕಾರವನ್ನು ನೀಡುತ್ತಿದೆ ಎಂದಿದೆ.
ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಜೆಇಎಂಗೆ ಸಂಘಟನೆಗೆ ಐಎಸ್‌ಐ ಹೆಚ್ಚಿನ ಒತ್ತು ನೀಡುತ್ತಿದ್ದು, ಎಲ್‌ಇಟಿ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಿಂತಲೂ ಜೆಇಎಂ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂದು ವರದಿ ಹೇಳಿದೆ.
ಇನ್ನು, ಅಸರ್ ಎ ಜೈಶ್ ಎಂಬ ಉಪಸಂಘಟನೆಯನ್ನು ಜೆಇಎಂ ಟೆಲಿಗ್ರಾಂನಲ್ಲಿ ಹುಟ್ಟುಹಾಕಿದ್ದು, ಈ ಮೂಲಕ ಜಮ್ಮು ಕಾಶ್ಮೀರದ ಯುವಕರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಈ ಮೂಲಕ ದೆಹಲಿ, ಮುಂಬೈ ಹಾಗೂ ಲಕ್ನೋಗಳನ್ನು ಇದು ಟಾರ್ಗೆಟ್ ಮಾಡಿದೆ ಎಂದು ವರದಿ ಹೇಳಿದೆ.
Discussion about this post