ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ವಿಜಯ ದೊರೆತಿದ್ದು, ಕತಾರ್’ನಲ್ಲಿ ಬಂಧನಕ್ಕೋಳಗಾಗಿದ್ದ ಭಾರತೀಯ ನೌಕಾ ಪಡೆಯ Indian Navy ಮರಣ ದಂಡನೆಗೆ ಒಳಗಾಗಿದ್ದ ಎಂಟು ಸಿಬ್ಬಂದಿಗಳನ್ನು ಬಿಡುಗಡೆ ಮಾಡಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿ ಆಗಿದೆ.
ಎಂಟು ಯೋಧರ ಬಿಡುಗಡೆಗೆ ಅಲ್ಲಿನ ಸರ್ಕಾರದೊಂದಿಗೆ ನಡೆಸಿದ ರಾಜತಾಂತ್ರಿಕ ಮಾತುಕಥೆ ಯಶಸ್ವಿಯಾಗಿದೆ. ಎಂಟು ಸಿಬ್ಬಂದಿಗಳು ಬಿಡುಗಡೆ ಆಗಿದ್ದು, ಇದರಲ್ಲಿ ಏಳು ಮಂದಿ ಈಗಾಗಲೇ ನವದೆಹಲಿ ತಲುಪಿದ್ದಾರೆ.

ಎಂಟು ಸಿಬ್ಬಂದಿಗಳ ಬಿಡುಗಡೆ ವಿಚಾರದಲ್ಲಿ ಡಿಸೆಂಬರ್ 1 ರಂದು ಕತಾರ್ ನ ಅಮೀರ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಮಾತುಕತೆ ನಡೆಸಿದ್ದರು. ಅಂದಿನ ಮಾತುಕತೆ ಈಗ ಫಲ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post