ಕಲ್ಪ ಮೀಡಿಯಾ ಹೌಸ್
ನವದೆಹಲಿ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಪತ್ರೊಡೆಗೆ ಕೇಂದ್ರ ಸರ್ಕಾರ ಸಾಂಪ್ರದಾಯಿಕ ತಿಂಡಿಯ ಮಾನ್ಯತೆ ನೀಡಿದೆ.
ಕೇಂದ್ರ ಆಯುಶ್ ಇಲಾಖೆ ಈ ಮಾನ್ಯತೆ ನೀಡಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಆಹಾರ ಸಹಕಾರಿಯಾಗಿದೆ ಎಂದು ಹೇಳಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಗಾಲದ ಅವಧಿಯಲ್ಲೇ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ನೀರು ಹರಿಯುವ ಅಥವಾ ನೀರಿನ ಸ್ರಾವ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳೆಯುವ ಕೆಸುವಿನ ಎಲೆಯಲ್ಲಿ ಪತ್ರೊಡೆಯನ್ನು ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಅಂಶ ವಿಟಮಿನ್ ಸಿ ಸಹ ಅಧಿಕವಾಗಿದೆ. ಕೆಸುವಿನ ಎಲೆಯಲ್ಲಿ ನಾನಾ ಬಗೆಯಿದ್ದು, ಎರಡು ಮೂರು ತರಹದ ಎಲೆಗಳು ಮಾತ್ರ ಸೇವನೆಗೆ ಯೋಗ್ಯವಾದುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post