ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜ.22ರಂದು ಅಯೋಧ್ಯೆಯಲ್ಲಿ Ayodhya Rama Mandira ಪ್ರಾಣ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಲಲ್ಲಾ ಪ್ರೀತಿಗಾಗಿ ಯಜಮಾನಿಕೆ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಇದಕ್ಕಾಗಿ ದೇಶದ ಯಾವುದೇ ನಾಯಕರು ಮಾಡಿರದ ಕಠಿಣ ವ್ರತವನ್ನು ಕೈಗೊಂಡಿದ್ದಾರೆ.
ಪ್ರಾಣ ಪ್ರತಿಷ್ಠಾಪನೆ ಯಜಮಾನಿಕೆ ವಹಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಶಾಸ್ತ್ರೋಕ್ತವಾಗಿ ಕೆಲವು ವ್ರತ ಹಾಗೂ ಆಚರಣೆಗಳನ್ನು ಪೂರ್ವಭಾವಿಯಾಗಿ ಕೈಗೊಳ್ಳುವುದು ಅಗತ್ಯವಾಗಿತ್ತು. ಇದನ್ನು ಅತ್ಯಂತ ಸಂತೋಷ ಹಾಗೂ ಭಕ್ತಿಯಿಂದ ಪ್ರಧಾನಿಯವರು ನಡೆಸುತ್ತಿದ್ದಾರೆ.
ಹೇಗಿದೆ ಕಠಿಣ ವ್ರತಾಚರಣೆ?
ಶಾಸ್ತ್ರೋಕ್ತವಾಗಿ 11 ದಿನಗಳ ಕಠಿಣ ‘ಯಮ ನಿಯಮ’ ವ್ರತವನ್ನು ಕೈಗೊಂಡಿರುವ ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನಾ ಕಾರ್ಯ ಸಂಪನ್ನಗೊಳ್ಳುವವರೆಗೂ ಯಾವುದೇ ರೀತಿಯ ಹಾಸಿಗೆಯಿಲ್ಲದೇ ನೆಲದ ಮೇಲೆ ಮಲಗುತ್ತಿದ್ದಾರೆ.
Also read: ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ
ಪ್ರಮುಖವಾಗಿ ಎಲ್ಲ ರೀತಿಯ ಆಹಾರವನ್ನು ತ್ಯಜಿಸಿರುವ ಅವರು ಕೇವಲ ಎಳನೀರನ್ನು ಮಾತ್ರ ಸೇವಿಸಿ ಉಪವಾಸ ವ್ರತವನ್ನೂ ಸಹ ಮಾಡುತ್ತಿದ್ದಾರೆ.
ಘೋಷಿಸಿದ್ದರೂ, ಏನೆಂದು ಹೇಳಿರಲಿಲ್ಲ!
ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಪ್ರಧಾನಿಯವರು, ಈ ಕಾರ್ಯಕ್ಕಾಗಿ ದೇವರೇ ನನ್ನನ್ನು ಆಯ್ಕೆ ಮಾಡಿದ್ದಾನೆ ಎಂದು ಭಾವಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ವ್ರತಾಚರಣೆ ಕೈಗೊಳ್ಳುತ್ತೇನೆ ಎಂದಿದ್ದರು. ಆದರೆ, ಯಾವ ವ್ರತ ಕೈಗೊಳ್ಳುತ್ತಾರೆ? ಏನು ನಿಯಮ ಎನ್ನುವುದನ್ನು ಅವರು ಹೇಳಿಕೊಂಡಿರಲಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post