ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಶ್ರೀ ಪೇಜಾವರ ಮಠಾಧೀಶಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು Pejawara Shri ಬುಧವಾರ ದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಬಿಜೆಪಿ ಹಿರಿಯ ಧುರೀಣ ಎಲ್. ಕೆ. ಅಡ್ವಾಣಿಯವರನ್ನು L K Advani ಅವರ ನಿವಾಸದಲ್ಲಿ ಸೌಹಾರ್ಧ ಭೇಟಿ ಮಾಡಿ ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿದರು.
ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿದರು. ಹಾಗೂ ಆ ಹೋರಾಟದ ಫಲವಾಗಿ ಇಂದು ಭವ್ಯರಾಮಮಂದಿರ ನಿರ್ಮಾಣಗೊಳ್ಳುವಂತಾಗಿದೆ. ಅವರಿಗೆ ದೀರ್ಘಾಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ತಿಳಿಸಿದರು.
ಶ್ರೀ ವಿಶ್ವೇಶತೀರ್ಥಶ್ರೀಪಾದರು ತಮಗೆ ಯಾವತ್ತೂ ನೀಡಿದ ಸ್ಫೂರ್ತಿಯನ್ನು ಅಡ್ವಾಣಿಯವರು ಮನಸಾರೆ ಸ್ಮರಿಸಿದರು. ಅಡ್ವಾಣಿಯವರ ಪುತ್ರಿ ಪ್ರತಿಭಾ ಅಡ್ವಾಣಿ ಮತ್ತು ಮನೆ ಮಂದಿ ಶ್ರೀಗಳವರನ್ನು ಬರಮಾಡಿಕೊಂಡರು. ಸ್ವಲ್ಪ ಅನಾರೋಗ್ಯವಿದ್ದರೂ ಅಡ್ವಾಣಿಜೀ ಮನೆ ಬಾಗಿಲಿನ ಬಂದು ಶ್ರೀಗಳವರನ್ನು ಬೀಳ್ಕೊಟ್ಟರು.
Also read: ಸರ್ಜಿ ಫೌಂಡೇಶನ್‌ನಿಂದ 200ಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post