ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ(ಬ್ರಾಹ್ಮಿನ್ ಭಾರತ್ ಛೋಡೋ) ಎಂಬ ವಿವಾದಾತ್ಮಕ ಸಾಲುಗಳನ್ನು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ JNU ಗೋಡೆಗಳ ಮೇಲೆ ಬರೆಯಲಾಗಿದೆ.
ಕಳೆದ ರಾತ್ರಿ ಸ್ಕೂಲ್ ಆಫ್ ಇಂಟರ್’ನ್ಯಾಶನಲ್ ಸ್ಟಡೀಸ್-ಐಐ ಕಟ್ಟಡದ ಗೋಡೆಗಳ ಮೇಲೆ ವಿವಾದಾತ್ಮಕ ಬರಹಗಳು ಕಂಡು ಬಂದಿವೆ. ಕ್ಯಾಂಪಸ್’ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ.
ಎರಡು ಸಮುದಾಯಗಳ ವಿರುದ್ಧದ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ, ರಕ್ತವಿದೆ, ಬ್ರಾಹ್ಮಣ ಭಾರತ್ ಛೋಡೋ ಮತ್ತು ಬ್ರಾಹ್ಮಿನೋ-ಬನಿಯಾಸ್, ನಾವು ನಿಮಗಾಗಿ ಬರುತ್ತಿz್ದೆÃವೆ! ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಬರೆಯಲಾಗಿದೆ.
Also read: ಹೊಸದುರ್ಗದಲ್ಲಿ ವೃದ್ಧ ದಂಪತಿಯ ಕತ್ತು ಕೊಯ್ದು ಭೀಕರ ಹತ್ಯೆ
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಲಪತಿ ಶಾಂತಿ ಡಿ. ಪಂಡಿತ್, ವಿಭಾಗದ ಕುಂದುಕೊರತೆಗಳ ಸಮಿತಿಯ ಡೀನ್ ಅವರಿಂದ ಈ ಬಗ್ಗೆ ವರದಿ ಕೇಳಲಾಗಿದೆ. ಅಲ್ಲದೇ ಕ್ಯಾಂಪಸ್’ನಲ್ಲಿ ಈ ಪ್ರತ್ಯೇಕವಾದ ಪ್ರವೃತ್ತಿಯನ್ನು ಖಂಡಿಸುತ್ತೇವೆ. ಜೆಎನ್’ಯು ಎಲ್ಲರಿಗೂ ಸೇರಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post