ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೊಚ್ಚಿಯಲ್ಲಿ ವಾಟರ್ ಮೆಟ್ರೋ Water Metro ಯಶಸ್ವಿಯಾದ ಬೆನ್ನಲ್ಲೇ ದೇಶದ 18 ಮಹಾನಗರಗಳಲ್ಲಿ ವಾಟರ್ ಮೆಟ್ರೋ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ಈ ಕುರಿತಂತೆ ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಈಗಾಗಲೇ ಕರಡು ರಾಷ್ಟ್ರೀಯ ಜಲ ಮೆಟ್ರೋ ನೀತಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ.
ವರದಿಯಂತೆ, ದೇಶದ 18 ನಗರಗಳಲ್ಲಿ ವಾಟರ್ ಮೆಟ್ರೋ ಸಾರಿಗೆ ಪರಿಚಯಿಸಲು ಮುಂದಾಗಿದ್ದು, ಶೀಘ್ರ ಜಾರಿಯಾಗುವ ಸಾಧ್ಯತೆಯಿದೆ.
ಮಾಹಿತಿಯಂತೆ, ಮೊದಲ ಹಂತದಲ್ಲಿ ಉತ್ತರ ಪ್ರದೇಶದ ವಾರಣಾಸಿ, ಅಯೋಧ್ಯೆ, ಪ್ರಯಾಗರಾಜ್, ಶ್ರೀನಗರ, ಪಾಟ್ನಾಗಳಲ್ಲಿ ವಾಟರ್ ಮೆಟ್ರೋ ಸಾರಿಗೆಯನ್ನು ಆರಂಭಿಸಲಾಗುತ್ತದೆ ಎಂದು ವರದಿಯಾಗಿದೆ.
ಇನ್ನು, ಎರಡನೇ ಹಂತದಲ್ಲಿ ಅಸ್ಸಾಂನ ತೇಜ್ಪುರ, ದಿಬ್ರುಗಢದಲ್ಲಿ ಆರಂಭಿಸಲಾಗುತ್ತದೆ.
Also read: ಜೂನ್ 1ರಂದು ಶಿವಮೊಗ್ಗಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ | ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ?
ವಾಟರ್ ಮೆಟ್ರೋದ ಪ್ರಯೋಜನವೇನು?
ವಾಟರ್ ಮೆಟ್ರೋ ಸಾರಿಗೆ ಜಾರಿಯಿಂದ ಅಗ್ಗದ ಮತ್ತು ಮಾಲಿನ್ಯ ಮುಕ್ತ ಸಾರಿಗೆ ವಿಧಾನವಾಗಿದೆ. ಅಲ್ಲದೇ, ಪ್ರಮುಖವಾಗಿ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
2023 ರ ಎಪ್ರಿಲ್ 25 ರಂದು ಕೊಚ್ಚಿಯಲ್ಲಿ ಪ್ರಾರಂಭವಾದ ವಾಟರ್ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆ ಸಕ್ಸಸ್ ಕಂಡ ಬೆನ್ನಲ್ಲೇ ದೇಶದಾದ್ಯಂತ ಈ ಯೋಜನೆ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















