ಕಲ್ಪ ಮೀಡಿಯಾ ಹೌಸ್
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯಹೊಂದಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕ್ಲಿಯರೆನ್ಸ್ ನೀಡಲಿದೆ ಎಂಬ ವಿಶ್ವಾಸವಿದೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ದಿ ವೈರ್ ಮಾಧ್ಯಮದ ಕರಣ್ ಥಾಪರ್ ಅವರೊಂದಿಗೆ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್, ಕೋವ್ಯಾಕ್ಸಿನ್‌ಗೆ ಕ್ಲಿಯರೆನ್ಸ್ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಪ್ಯಾಂಡೆಮಿಕ್ ಹಂತದಲ್ಲಿದ್ದ ಕೋವಿಡ್-19 ಸೋಂಕು ಈಗ ಎಂಡೆಮಿಕ್ ಹಂತ ತಲುಪುತ್ತಿದೆ ಎಂದಿದ್ದಾರೆ.
ಎಂಡೆಮಿಕ್ ಹಂತದಲ್ಲಿ ಸೋಂಕು ಪ್ರಸರಣ ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿರುತ್ತದೆ. ಹಾಗೂ ಜನಸಂಖ್ಯೆ ವೈರಾಣುವಿನೊಂದಿಗೆ ಜೀವಿಸುವುದನ್ನು ಕಲಿಯುವ ಹಂತವಾಗಿದೆ ಎಂದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post